ಮಹಾರಾಷ್ಟ್ರದಲ್ಲಿ 4.2 ತೀವ್ರತೆಯ ಭೂಕಂಪನ
Update: 2024-09-30 17:05 IST
ಸಾಂದರ್ಭಿಕ ಚಿತ್ರ (PTI)
ನಾಗ್ಪುರ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನ 4.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ ಎಂದು ಅಮರಾವತಿ ಜಿಲ್ಲಾಧಿಕಾರಿ ಅನಿಲ್ ಭಟ್ಕರ್ ತಿಳಿಸಿದ್ದಾರೆ.
ಅಮರಾವತಿ ಜಿಲ್ಲೆಯ ಚಿಖಲಧಾರ ತಾಲೂಕಿನ ಅಮ್ಝರಿ ಮತ್ತು ಟೆಟು ಗ್ರಾಮಗಳಲ್ಲಿ ಮಧ್ಯಾಹ್ನ 1.37ಕ್ಕೆ ಭೂಕಂಪ ಸಂಭವಿಸಿದೆ ಎಂದು ಎನ್ಸಿಎಸ್ ತಿಳಿಸಿದೆ.