×
Ad

42 ಮಾದರಿ ಪರೀಕ್ಷೆ ನೆಗೆಟಿವ್, ಯಾವುದೇ ಹೊಸ ನಿಫಾ ಪ್ರಕರಣ ವರದಿಯಾಗಿಲ್ಲ: ಕೇರಳ ಸರಕಾರ

Update: 2023-09-17 15:33 IST

Photo: twitter

ಕೋಝಿಕೋಡ್ (ಕೇರಳ): ಹೆಚ್ಚಿನ ಅಪಾಯದ ಸಂಪರ್ಕ ಪಟ್ಟಿಯಲ್ಲಿರುವ ವ್ಯಕ್ತಿಗಳ 42 ಮಾದರಿಗಳ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಆಗುವುದರೊಂದಿಗೆ ಇಂದು ಯಾವುದೇ ಹೊಸ ನಿಫಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇರಳ ಸರಕಾರ ರವಿವಾರ ತಿಳಿಸಿದೆ.

ಇಂದು ಬೆಳಗ್ಗೆ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ನೆಗೆಟಿವ್ ಫಲಿತಾಂಶಗಳನ್ನು ಪ್ರಕಟಿಸಿದರು.

ಹೆಚ್ಚಿನ ಮಾದರಿಗಳ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ ಇಂದು ಲಭ್ಯವಾಗಬಹುದು ಎಂದು ಅವರು ಹೇಳಿದರು.

ಯಾವುದೇ ಹೊಸ ನೆಗೆಟಿವ್ ಪ್ರಕರಣಗಳು ವರದಿಯಾಗದ ಕಾರಣ ಎಷ್ಟು ಸಮಯದವರೆಗೆ ಜಾಗರೂಕತೆ ಮತ್ತು ಎಚ್ಚರಿಕೆ ವಹಿಸಬೇಕು ಎಂದು ಕೇಳಿದಾಗ, ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್ ಗಳ ಪ್ರಕಾರ ಇದು ಕೊನೆಯ ನೆಗೆಟಿವ್ ಪ್ರಕರಣದಿಂದ 42 ದಿನಗಳ ತನಕ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರು ಹೇಳಿದರು.

ಏತನ್ಮಧ್ಯೆ, ಕೇಂದ್ರ ತಂಡವು 2018 ರ ನಿಫಾ ಕಂಡುಬಂದ ಪ್ರದೇಶವನ್ನು ಸಮೀಕ್ಷೆ ನಡೆಸಲಿದೆ ಮತ್ತು ಅಲ್ಲಿ ಯಾವುದೇ ಪರಿಸರ ಬದಲಾವಣೆ ಆಗಿದೆಯೇ ಎಂದು ನೋಡಲಿದೆ ಎಂದು ಸಚಿವರು ಹೇಳಿದರು..

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News