ರಾಜಸ್ಥಾನ: ಬಸ್‌ಗೆ ಕಾರು ಢಿಕ್ಕಿ; ಕುಂಭಮೇಳಕ್ಕೆ ತೆರಳುತ್ತಿದ್ದ 8 ಮಂದಿ ಮೃತ್ಯು
Update: 2025-02-06 23:46 IST
Photo - indiatoday
ಜೈಪುರ: ಉತ್ತರಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುತ್ತಿದ್ದ ಕಾರು ಬಸ್‌ಗೆ ಢಿಕ್ಕಿಯಾಗಿ ಅದರಲ್ಲಿದ್ದ 8 ಮಂದಿ ಸಾವನ್ನಪ್ಪಿದ ಘಟನೆ ಜೈಪುರದಲ್ಲಿ ಗುರುವಾರ ಸಂಭವಿಸಿದೆ.
ಜೈ ಪುರದ ಮೂಕಾಂಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಕಾರಿನ ಟಯರ್ ಸ್ಫೋಟಗೊಂಡ ಬಳಿಕ ಕಾರು ನಿಯಂತ್ರಣ ಕಳೆದುಕೊಂಡಿತು. ಅನಂತರ ರಸ್ತೆ ವಿಭಾಜಕದ ಮೇಲೆ ಚಲಿಸಿತು ಹಾಗೂ ಬಸ್‌ಗೆ ಢಿಕ್ಕಿಯಾಯಿತು.
ಕಾರಿನಲ್ಲಿದ್ದ ಎಲ್ಲರೂ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ
https://whatsapp.com/channel/0029VaA8ju86LwHn9OQpEq28