×
Ad

ಮಾಧ್ಯಮಗಳು ಹೆಚ್ಚಾಗಿ ಮೋದಿ ಸರಕಾರದ ಪರ ಇವೆ ಎಂದು ಶೇ. 80ರಷ್ಟು ಪತ್ರಕರ್ತರ ಅಭಿಪ್ರಾಯ: ಲೋಕನೀತಿ-ಸಿಎಸ್‌ಡಿಎಸ್‌ ಸಮೀಕ್ಷೆ

Update: 2023-07-28 18:01 IST

ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ಮಾಧ್ಯಮಗಳು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪರ ವರದಿಗಳನ್ನೇ ಬಹಳಷ್ಟು ಪ್ರಕಟಿಸುತ್ತವೆ ಎಂದು ಶೇ.80ರಷ್ಟು ಪತ್ರಕರ್ತರು ನಂಬಿದ್ದಾರೆ ಎಂದು ಲೋಕನೀತಿ ಮತ್ತು ಸೆಂಟರ್‌ ಫಾರ್‌ ದಿ ಸ್ಟಡಿ ಆಫ್‌ ಡೆವಲೆಪಿಂಗ್‌ ಸೊಸೈಟೀಸ್‌ ವರದಿ ಹೇಳಿದೆ.

“ಇಂಡಿಯನ್‌ ಮೀಡಿಯಾ: ಟ್ರೆಂಡ್ಸ್‌ ಎಂಡ್‌ ಪ್ಯಾಟರ್ನ್ಸ್‌” ಎಂಬ ಹೆಸರಿನ ವರದಿಯನ್ನು ಗುರುವಾರ ಬಿಡುಗಡೆಗೊಳಿಸಲಾಗಿದೆ.

ಈ ಅಧ್ಯಯನಕ್ಕಾಗಿ ದೇಶದ ವಿವಿಧ ಭಾಗಗಳ ಟಿವಿ, ಮುದ್ರಣ ಮತ್ತು ಡಿಜಿಟಲ್‌ ಮಾಧ್ಯಮದ 206 ಪತ್ರಕರ್ತರ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.41ರಷ್ಟು ಮಂದಿ ಹಿಂದಿ ಮಾಧ್ಯಮಗಳ ಪತ್ರಕರ್ತರಾಗಿದ್ದರೆ, ಶೇ 32 ಮಂದಿ ಆಂಗ್ಲ ಭಾಷೆಯ ಪತ್ರಕರ್ತರು ಮತ್ತು ಶೇ27 ಮಂದಿ ಪ್ರಾದೇಶಿಕ ಭಾಷೆಯ ಪತ್ರಿಕೆಗಳ ಪತ್ರಕರ್ತರಾಗಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ.54 ಮಂದಿ ಖಾಯಂ ಪತ್ರಕರ್ತರಾಗಿದ್ದರೆ, ಶೇ27ರಷ್ಟು ಮಂದಿ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 8 ಮಂದಿ ಪ್ರಕಾರ ಮಾಧ್ಯಮಗಳು ವಿಪಕ್ಷಗಳ ಪರ ವರದಿ ಮಾಡುತ್ತವೆ ಎಂದು ಹೇಳಿದರೆ ವಿಪಕ್ಷಗಳ ವಿಚಾರವನ್ನು ಪ್ರತಿಕೂಲವಾಗಿ ಮಾಧ್ಯಮಗಳು ವರದಿ ಮಾಡುತ್ತವೆ ಎಂದು ಶೇ. 61ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.

ಮಾಧ್ಯಮ ಸಂಸ್ಥೆಗಳು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಪರ ಇವೆ ಎಂದು ಶೇ.73 ಮಂದಿ ಅಭಿಪ್ರಾಯಪಟ್ಟಿದ್ದಾರೆ. ಈ ಶೇ73ರಷ್ಡು ಮಂದಿಯ ಪೈಕಿ ಶೇ82ರಷ್ಟು ಮಂದಿ ಮಾಧ್ಯಮಗಳು ಬಿಜೆಪಿ ಪರ ಎಂದರೆ ಕೇವಲ ಶೇ 3 ಮಂದಿ ಮಾತ್ರ ಮಾದ್ಯಮಗಳು ಕಾಂಗ್ರೆಸ್‌ ಪರ ಎಂದು ಹೇಳಿದ್ದಾರೆ.

ಶೇ.86ರಷ್ಟು ಸ್ವತಂತ್ರ ಪತ್ರಕರ್ತರು ಮಾಧ್ಯಮಗಳು ಮೋದಿ ಸರ್ಕಾರದ ಬಹಳಷ್ಟು ಪರವಾಗಿವೆ ಎಂದರೆ ವಿವಿಧ ಸುದ್ದಿ ಸಂಸ್ಥೆಗಳಿಗೆ ವರದಿ ಮಾಡುವ ಶೇ.81 ಮಂದಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿ ವಾಹಿನಿಗಳು ಈ ದಿನಗಳಲ್ಲಿ ತಮ್ಮ ಕೆಲಸ ಸರಿಯಾಗಿ ಮಾಡಲು ಕಡಿಮೆ ಸ್ವತಂತ್ರರು ಎಂದು ಪ್ರತಿ ಶೇ.72ರಷ್ಟು ಮಂದಿ ಹೇಳಿದರೆ, ಇದೇ ವಿಚಾರದಲ್ಲಿ ಸುದ್ದಿಪತ್ರಿಕೆಗಳ ಸ್ವಾತಂತ್ರ್ಯ ಕಡಿಮೆ ಎಂದು ಶೇ 55 ಮಂದಿ ಹಾಗೂ ಡಿಜಿಟಲ್‌ ಮಾಧ್ಯಮಗಳ ಸ್ವಾತಂತ್ರ್ಯ ಕಡಿಮೆ ಎಂದು ಶೇ 36 ಮಂದಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News