×
Ad

ಲಡಾಖ್‌ ಗೆ ರಾಜ್ಯದ ಸ್ಥಾನಮಾನ ಆಗ್ರಹಿಸಿ ಕಾರ್ಗಿಲ್ ನಲ್ಲಿ 3 ದಿನಗಳ ಉಪವಾಸ ಧರಣಿ ಆರಂಭ

Update: 2024-03-24 21:56 IST

Photo: PTI 

ಕಾರ್ಗಿಲ್ : ಲಡಾಖ್ ಅನ್ನು ಸಂವಿಧಾನದ 6ನೇ ಪರಿಚ್ಛೇದದಲ್ಲಿ ಸೇರಿಸಬೇಕು ಹಾಗೂ ಲಡಾಖ್‌ ಗೆ ರಾಜ್ಯದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಗಳು ಸೇರಿದಂತೆ ತಮ್ಮ ನಾಲ್ಕು ಅಂಶಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಗಿಲ್ ಡೆಮಾಕ್ರೆಟಿಕ್ ಅಲಿಯನ್ಸ್ (ಕೆಡಿಎ) ಇಲ್ಲಿ ರವಿವಾರ ಮೂರು ದಿನಗಳ ಉಪವಾಸ ಧರಣಿ ಆರಂಭಿಸಿತು.

ಕೇಂದ್ರ ಸರಕಾರದ ವಿರುದ್ಧ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ವಿವಿಧ ಕ್ಷೇತ್ರಗಳ ಜನರು ಪಾಲ್ಗೊಂಡರು.

ಹವಾಮಾನ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಲೇಹ್‌ ನಲ್ಲಿ ಪ್ರತ್ಯೇಕವಾಗಿ ನಡೆಸುತ್ತಿರುವ ಉಪವಾಸ ಧರಣಿ 19ನೇ ದಿನಕ್ಕೆ ಕಾಲಿರಿಸಿದೆ. ಲೇಹ್ ಮೂಲದ ಅತ್ಯುಚ್ಛ ಸಂಘಟನೆಯ ಪ್ರತಿನಿಧಿಗಳು ಹಾಗೂ ಸರಕಾರದ ನಡುವಿನ ಮಾತುಕತೆ ಮುರಿದು ಬಿದ್ದ ಬಳಿಕ ವಾಂಗ್ಚುಕ್ ಕೇಂದ್ರ ಗೃಹ ಸಚಿವಾಲಯದ ನಂಬಿಕೆ ದ್ರೋಹದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.

ಕೆಡಿಎ ಹಾಗೂ ಲೆಹ್ ಮೂಲದ ಸರ್ವೋಚ್ಛ ಸಂಸ್ಥೆ ಎರಡು ಜಿಲ್ಲೆಗಳ ವಿವಿಧ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳ ಪ್ರತ್ಯೇಕ ಗುಂಪುಗಳು. ಸ್ಥಳೀಯ ಯುವಕರಿಗೆ ಉದ್ಯೋಗ ಮೀಸಲಾತಿ ಹಾಗೂ ರಾಜ್ಯ ಸಭೆಯಲ್ಲಿ ಒಂದು ಸ್ಥಾನ ಮೀಸಲು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಈ ಎರಡು ಸಂಘಟನೆಗಳು ವಹಿಸಿವೆ.

200ಕ್ಕೂ ಅಧಿಕ ಸ್ವಯಂ ಸೇವಕರೊಂದಿಗೆ ಕೆಡಿಎಯ ಎಲ್ಲಾ ನಾಯಕರು ರವಿವಾರ ಬೆಳಗ್ಗೆ ಹುಸೈನಿ ಪಾರ್ಕ್ನಲ್ಲಿ ಸೇರಿದರು. ಅಲ್ಲದೆ, ಲೇಹ್‌ ನಲ್ಲಿ ಮಾರ್ಚ್ 6ರಿಂದ ಹವಾಮಾನ ಉಪವಾಸ ಧರಣಿ ನಡೆಸುತ್ತಿರುವ ವಾಂಗ್ ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮೂರು ದಿನಗಳ ಉಪವಾಸ ಧರಣಿ ಆರಂಭಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News