×
Ad

ತಾಯಿಯಿಂದ ಮಗುವಿನ ಹತ್ಯೆ ಪ್ರಕರಣ ; ವಿಚಾರಣೆಗೆ ಹಾಜರಾದ ಪರಿತ್ಯಕ್ತ ಪತಿ ವೆಂಕಟರಮಣ್

Update: 2024-01-13 21:42 IST

ಸುಚನಾ ಸೇಠ್ | Photo: PTI 

ಪಣಜಿ: ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆಗೈದ ಆರೋಪದಲ್ಲಿ ಬಂಧಿತರಾಗಿರುವ ಕೃತಕಬುದ್ದಿ ಮತ್ತೆಯ ನವೋದ್ಯಮ ‘ಮೈಂಡ್ಫುಲ್ ಎ.ಐ. ಲ್ಯಾಬ್’ನ ಕಾರ್ಯನಿರ್ವಹಣಾಧಿಕಾರಿ ಸುಚನಾ ಸೇಠ್ ನ ಪರಿತ್ಯಕ್ತ ಪತಿ ವೆಂಕಟರಮಣ್ ಗೋವಾದ ಕಲಂಗೂಟ್ ಪೊಲೀಸರ ಮುಂದೆ ಶನಿವಾರ ಹಾಜರಾಗಿದ್ದಾರೆ.

ಸುಚನಾ ಸೇಠ್ ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ತನ್ನ ಪುತ್ರನನ್ನು ಹತ್ಯೆಗೈದಿದ್ದಳು. ಆತನ ಮೃತದೇಹವನ್ನು ಬ್ಯಾಗ್ನಲ್ಲಿರಿಸಿ ಬೆಂಗಳೂರಿಗೆ ಹಿಂದಿರುಗಲು ಟ್ಯಾಕ್ಸಿ ಹಿಡಿದಿದ್ದಳು. ಆದರೆ, ಜನವರಿ ೮ರಂದು ಕರ್ನಾಟಕದ ಚಿತ್ರದುರ್ಗದಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದರು.

‘‘ಆರೋಪಿ ಸುಚನಾ ಸೇಠ್ ನ ಪರಿತ್ಯಕ್ತ ಪತಿ ವೆಕಂಟರಮಣ ಬೆಂಗಳೂರಿನಿಂದ ಇಲ್ಲಿಗೆ ಮಧ್ಯಾಹ್ನ ಆಗಮಿಸಿದ್ದಾರೆ ಹಾಗೂ ಕಲಂಗೂಟ್ ಪೊಲೀಸ್ ಠಾಣೆಗೆ ತಲುಪಿದ್ದಾರೆ. ತನಿಖೆಯ ಭಾಗವಾಗಿ ನಾವು ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ನನ್ನ ಮತ್ತು ಸುಚನಾ ನಡುವಿನ ವಿವಾಹ ವಿಚ್ಛೇದನದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಮಗುವನ್ನು ವಾರಕ್ಕೊಮ್ಮೆ ಭೇಟಿಯಾಗಲು ನ್ಯಾಯಾಲಯ ನನಗೆ ಅವಕಾಶ ನೀಡಿದೆ. ಆದರೆ, ಕಳೆದ ಕೆಲವು ವಾರಗಳಿಂದ ಮಗುವನ್ನು ಭೇಟಿಯಾಗಲು ಸುಚನಾ ನನಗೆ ಅವಕಾಶ ನೀಡಿರಲಿಲ್ಲ ಎಂದು ವೆಂಕಟರಮಣ್ ಹೇಳಿಕೆ ನೀಡಿದ್ದಾರೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾದ ಕ್ಯಾಂಡೋಲಿಮ್ನಲ್ಲಿರುವ ಸರ್ವೀಸ್ ಅಪಾರ್ಟ್ಮೆಂಟ್ ನಲ್ಲಿ ಹತ್ಯೆಘಟನೆ ನಡದೆ ಸಂದರ್ಭ ವೆಂಕಟರಮಣ್ ಅವರು ಜಕಾರ್ತದಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News