×
Ad

ಹೊಸ ಉದ್ಯೋಗದ ಸಂಭ್ರಮಾಚರಣೆಗೆ ಆಗಮಿಸಿದ್ದ ಸ್ನೇಹಿತರಿಂದ ಟೆಕ್ಕಿ ಮೇಲೆ ಅತ್ಯಾಚಾರ

Update: 2024-07-31 10:35 IST

ಹೈದರಾಬಾದ್: ಹೊಸ ಉದ್ಯೋಗ ದೊರಕಿದ ಸಂಭ್ರಮಾಚರಣೆಗೆ ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಸ್ನೇಹಿತರಿಬ್ಬರನ್ನು ಆಹ್ವಾನಿಸಿದ್ದು, ಈ ಇಬ್ಬರು ಆಹ್ವಾನ ನೀಡಿದ ಸ್ನೇಹಿತೆ ಮೇಲೆಯೇ ಅತ್ಯಾಚಾರ ಎಸಗಿದ ಪ್ರಕರಣ ವರದಿಯಾಗಿದೆ.

ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಮೇಲೆ ಆಕೆಯ ಬಾಲ್ಯ ಸ್ನೇಹಿತರೇ ಹೈದರಾಬಾದ್ ಹೋಟೆಲ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಹೊಸ ಉದ್ಯೋಗದ ಸಂಭ್ರಮಾಚರಣೆಗೆ ಬಾಲ್ಯಸ್ನೇಹಿತ ಗೌತಮ್ ರೆಡ್ಡಿ ಹಾಗೂ ಇಬ್ಬರಿಗೂ ಸ್ನೇಹಿತನಾಗಿದ್ದವನನ್ನು ಆಹ್ವಾನಿಸಿದ್ದಾಗಿ ಮಹಿಳೆ ಹೇಳಿದ್ದಾರೆ. ಹೈದರಾಬಾದ್ ನ ವನಸ್ಥಾಲಿಪುರಂನ ಬಾರ್ಗೆ ಆಗಮಿಸಿದ್ದ ಇಬ್ಬರು ಸ್ನೇಹಿತರು ಮದ್ಯಪಾನ ಮಾಡಿ ಆಕೆಯನ್ನು ಹೋಟೆಲ್ ರೂಂಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಯುವತಿ ಮತ್ತು ರೆಡ್ಡಿ 2ನೇ ತರಗತಿಯಿಂದ 10ನೇ ತರಗತಿವರೆಗೆ ಸಹಪಾಠಿಗಳಾಗಿದ್ದರು ಎಂದು ಇನ್ಸ್ಪೆಕ್ಟರ್ ಡಿ.ಜಲೇಂದರ್ ರೆಡ್ಡಿ ಹೇಳಿದ್ದಾರೆ.

ತೆಲಂಗಾಣದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ವಿವಾಹಿತ ಮಹಿಳೆಯೊಬ್ಬರ ಮೇಲೆ ಆಕೆ ಪ್ರಯಾಣಿಸುತ್ತಿದ್ದ ಬಸ್ಸಿನ ಚಾಲಕ ಅತ್ಯಾಚಾರ ಎಸಗಿದ್ದಾನೆ ಎಂದು ಆಪಾದಿಸಲಾಗಿದೆ.

ನಿರ್ಮಲ್ನಿಂದ ಪ್ರಕಾಶಂ ಜಿಲ್ಲೆಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಚಾಲಕ ಅತ್ಯಾಚಾರ ಎಸಗಿದ್ದಾನೆ. ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾಗಿ ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News