×
Ad

ಚಲಿಸುತ್ತಿದ್ದ ಟ್ರಕ್‌ನಿಂದ ಸರಕುಗಳನ್ನು ಕಳ್ಳತನಗೈಯ್ಯುತ್ತಿರುವ ವೀಡಿಯೋ ವೈರಲ್‌

Update: 2024-05-25 17:28 IST

Screenbrab | PC : X 

ಚಲಿಸುತ್ತಿದ್ದ ಟ್ರಕ್‌ನಿಂದ ಸರಕುಗಳನ್ನು ಕಳ್ಳತನಗೈಯ್ಯುತ್ತಿರುವ ವೀಡಿಯೋ ವೈರಲ್‌

ಶದ ಶಜಾಪುರ್‌ನ ಆಗ್ರಾ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ಟ್ರಕ್‌ನಿಂದ ಮೂವರು ಸರಕುಗಳನ್ನು ಕಳ್ಳತನಗೈಯ್ಯುತ್ತಿರುವ ದೃಶ್ಯವನ್ನು ಅದೇ ರಸ್ತೆಯಲ್ಲಿ ಸಾಗುತ್ತಿರುವ ಇನ್ನೊಬ್ಬ ವ್ಯಕ್ತಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ 25-ಸೆಕೆಂಡ್‌ ಅವಧಿಯ ವೀಡಿಯೋದಲ್ಲಿ ಮೂವರು ಸರಕು ತುಂಬಿದ ಟ್ರಕ್‌ ಮೇಲೆ ಹತ್ತುತ್ತಿರುವುದು ಹಾಗೂ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಅದರ ಹಿಂದೆ ಸಾಗುತ್ತಿರುವುದು ಕಾಣಿಸುತ್ತದೆ. ಟ್ರಕ್‌ ಹಿಂದುಗಡೆಯಿಂದ ಹತ್ತಿದವರು ವಾಹನದಿಂದ ಹಳದಿ ಬಣ್ಣದ ಗೋಣಿ ಚೀಲದಲ್ಲಿ ತುಂಬಿದ ಸರಕನ್ನು ರಸ್ತೆಗೆಸೆಯುತ್ತಿರುವುದು ಹಾಗೂ ನಂತರ ಬೈಕ್‌ ಏರಿ ಸಾಗುತ್ತಿರುವುದು ಕಾಣಿಸುತ್ತದೆ.

ಆದರೆ ಈ ಘಟನೆಯ ಬಗ್ಗೆ ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಘಟನೆ ಯಾವಾಗ ನಡೆಯಿತೆಂಬುದರ ಕುರಿತೂ ಮಾಹಿತಿಯಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News