×
Ad

ಇನ್‌ಸ್ಟಾಗ್ರಾಮ್‌ನಲ್ಲಿ ಶ್ರದ್ಧಾಂಜಲಿ ಸಂದೇಶ ಹಾಕಿ ಆತ್ಮಹತ್ಯೆಗೈದ ಯುವಕ

Update: 2023-12-09 21:48 IST

ಕೊಚ್ಚಿ: ಕೇರಳ ರಾಜ್ಯದ ಕೊಚ್ಚಿ ಸಮೀಪದ ಅಳುವದ 28 ವರ್ಷದ ವ್ಯಕ್ತಿಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಸ್ವತಃ ತನಗೇ ಶ್ರದ್ಧಾಂಜಲಿ ಸಲ್ಲಿಸುವ ಸಂದೇಶವೊಂದನ್ನು ಹಾಕಿದ ಬಳಿಕ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ.

ಅಜ್ಮಲ್ ಶರೀಫ್ ಶುಕ್ರವಾರ ಸಂಜೆ 6:30ರ ಸುಮಾರಿಗೆ ತನ್ನ ಮನೆಯ ತನ್ನ ಕೋಣೆಯಲ್ಲಿ ನೇತು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಉತ್ತಮ ಕೆಲಸ ದೊರಕದ ಹಿನ್ನೆಲೆಯಲ್ಲಿ ಅವರು ಜೀವನದಲ್ಲಿ ಕೊಂಚ ಜಿಗುಪ್ಸೆಗೊಂಡಿದ್ದರು ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ’’ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಶರಣಾಗುವ ಮೊದಲು, ಅಜ್ಮಲ್ ತನ್ನ ಭಾವಚಿತ್ರದೊಂದಿಗೆ ‘ಆರ್ ಐ ಪಿ ಅಜ್ಮಲ್ ಶರೀಫ್ 1995-2023’ ಎಂಬ ಬರಹವುಳ್ಳ ಸಂದೇಶವನ್ನು ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಾಕಿದ್ದರು.

ಅಜ್ಮಲ್ ಇನ್‌ಸ್ಟಾಗ್ರಾಂನಲ್ಲಿ 14,000ಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News