×
Ad

ಮದುವೆಯ ಮುನ್ನಾ ದಿನ ಯುವತಿ ನಿಗೂಢ ಸಾವು

Update: 2023-12-03 09:16 IST

Photo: PTI

ಪ್ರಯಾಗ್ ರಾಜ್: ವಿವಾಹದ ಮುನ್ನಾ ದಿನ ಯುವತಿಯೊಬ್ಬಳು ನಿಗೂಢ ಸಾವಿಗೀಡಾದ ಪ್ರಕರಣ ಉತ್ತರ ಪ್ರದೇಶದ ಪ್ರಯಾಗ್ರಾಜ್ ನ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ.

ರೀನಾ (20) ಎಂಬ ಯುವತಿಯ ಶವ ದಾಲಾಪುರ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ಡಿಸಿಪಿ ಅಭಿಷೇಕ್ ಭಾರ್ತಿ ಹೇಳಿದ್ದಾರೆ.

ಯುವತಿಯನ್ನು ಹತ್ಯೆ ಮಾಡಲಾಗಿದ್ದು, ಇದರಲ್ಲಿ ಯುವತಿಯ ಬಾವ ತಾರಾಚಂದ್ರ ಬಿಂದ್ ಎಂಬಾತನ ಕೈವಾಡವಿದೆ ಎಂದು ಕುಟುಂಬದವರು ದೂರು ನೀಡಿದ್ದಾರೆ. ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.

ಈ ಮೊದಲು ಮೂರು ಬಾರಿ ಯುವತಿ, ಆರೋಪಿಯ ಜತೆಗೆ ಓಡಿಹೋಗಿದ್ದು, ಹತ್ತು ದಿನಗಳ ಹಿಂದಷ್ಟೇ ವಾಪಸ್ಸಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ. ರೀನಾ ಬೇರೆಯವರ ಜತೆ ವಿವಾಹವಾದರೆ ಆಕೆಯನ್ನು ಹತ್ಯೆ ಮಾಡುವುದಾಗಿ ಬಿಂದ್ ಎಚ್ಚರಿಕೆ ನೀಡಿದ್ದಾಗಿ ರೀನಾಳ ಅಕ್ಕ ಮೀನಾ ವಿಚಾರಣೆ ವೇಳೆ ತಿಳಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News