‘ಜನ ಸೂರಜ್ ಪಕ್ಷ’ದೊಂದಿಗೆ ‘ಆಪ್ ಸಬ್‌ಕಿ ಆವಾಝ್’ ವಿಲೀನ
ಆರ್‌ಸಿಪಿ ಸಿಂಗ್ | PC : X \ NDTV
ಹೊಸದಿಲ್ಲಿ: ತಾನು ಹೊಸದಾಗಿ ಸ್ಥಾಪಿಸಿದ ಪಕ್ಷ ‘ಆಪ್ ಸಬ್‌ಕಿ ಆವಾಝ್’ (ಎಎಸ್‌ಎ) ಅನ್ನು ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಸ್ಥಾಪಿಸಿದ ‘ಜನ ಸೂರಜ್ ಪಕ್ಷ’ದೊಂದಿಗೆ ವಿಲೀನಗೊಳಿಸಲಾಗಿದೆ ಎಂದು ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ರವಿವಾರ ಘೋಷಿಸಿದ್ದಾರೆ.
ಈ ಬೆಳವಣಿಗೆ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲಾ 243 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿರುವ ‘ಜನ ಸೂರಜ್ ಪಕ್ಷಕ್ಕೆ’ ನೈತಿಕ ಬೆಂಬಲ ನೀಡಿದೆ.
ಜೆಡಿ (ಯು) ವರಿಷ್ಠ ನಿತೀಶ್ ಕುಮಾರ್ ಅವರೊಂದಿಗಿನ ಒಲವು ಕಳೆದುಕೊಂಡ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್‌ಸಿಪಿ ಸಿಂಗ್ 2024 ಅಕ್ಟೋಬರ್ 31ರಂದು ‘ಆಪ್ ಸಬ್‌ಕಿ ಆವಾಝ್’ ಪಕ್ಷ ಸ್ಥಾಪಿಸಿದ್ದರು. ನಿತೀಶ್ ಕುಮಾರ್ ಅವರು ಒಲವು ಬದಲಾಯಿಸಿ ಮಹಾಘಟಬಂಧನ್ ಅಥವಾ ಮಹಾ ಮೈತ್ರಿ ಕೂಟಕ್ಕೆ 2023 ಮೇಯಲ್ಲಿ ಸೇರಿದ ಬಳಿಕ ಆರ್‌ಸಿಪಿ ಸಿಂಗ್ ಜೆಡಿ(ಯು)ಗೆ ರಾಜೀನಾಮೆ ನೀಡಿದ್ದರು.