‘ಬಜೆಟ್ ತಾರತಮ್ಯ’ ಆರೋಪ | ಜನರಲ್ಲಿ ತಪ್ಪು ಭಾವನೆ ಮೂಡಿಸಲು ಪ್ರತಿಪಕ್ಷಗಳ ಯತ್ನ: ನಿರ್ಮಲಾ
ನಿರ್ಮಲಾ ಸೀತಾರಾಮನ್ | PC : PTI
ಹೊಸದಿಲ್ಲಿ: ನೂತನ ಬಜೆಟ್ ನಲ್ಲಿ ಪ್ರತಿಪಕ್ಷ ಆಡಳಿತದ ರಾಜ್ಯಗಳನ್ನು ಕಡೆಗಣಿಸಲಾಗಿದೆಯೆಂದು ಆರೋಪಗಳಿಗೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತನ್ನ ಬಜೆಟ್ ಭಾಷಣದಲ್ಲಿ ನಿರ್ದಿಷ್ಟ ರಾಜ್ಯವನ್ನು ಉಲ್ಲೇಖಿಸದೆ ಇದ್ದಲ್ಲಿ, ಸರಕಾರದ ಕಾರ್ಯಕ್ರಮಗಳು ಆ ರಾಜ್ಯವನ್ನು ತಲುಪುವುದಿಲ್ಲವೆಂದು ಅರ್ಥವಲ್ಲ ಎಂದವರು ಹೇಳಿದರು.
ನಮ್ಮ ರಾಜ್ಯಗಳಿಗೆ ಕೇಂದ್ರ ಸರಕಾರ ಏನನ್ನೂ ನೀಡಿಲ್ಲವೆಂಬ ಭಾವನೆಯನ್ನು ಜನರಲ್ಲಿ ಮೂಡಿಸಲು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ನಡೆಸಿದ ಉದ್ದೇಶಪೂರ್ವಕ ಪ್ರಯತ್ನ ಇದಾಗಿದೆ. ಇದೊಂದು ಅತಿರೇಕದ ಆರೋಪವಾಗಿದೆ ಎಂದು ಆಕೆ ಸದನದಲ್ಲಿ ಹೇಳಿದ್ದಾರೆ.
‘‘ ಪ್ರತಿಯೊಂದು ಬಜೆಟ್ ನಲ್ಲಿಯೂ ನೀವು ಈ ದೇಶದ ಪ್ರತಿಯೊಂದು ರಾಜ್ಯದ ಹೆಸರನ್ನು ಹೇಳುವ ಅವಕಾಶ ದೊರೆಯುವುದಿಲ್ಲ. ಮಹಾರಾಷ್ಟ್ರದ ವಡವಾನ್ ನಲ್ಲಿ ಬಂದರನ್ನು ನಿರ್ಮಿಸುವ ನಿರ್ಧಾರವನ್ನು ಕೇಂದ್ರ ಸಂಪುಟ ಕೈಗೊಂಡಿದೆ. ಆದರೆ ಮಂಗಳವರ ಮಂಡಿಸಲಾದ ಬಜೆಟ್ನಲ್ಲಿ ಮಹಾರಾಷ್ಟ್ರದ ಹೆಸರನ್ನೇ ಉಲ್ಲೇಖಿಸಿಲ್ಲ.ಹಾಗೆಂದರೆ ಮಹಾರಾಷ್ಟ್ರವನ್ನು ಕಡೆಗಣಿಸಲಾಗಿದೆಯೆಂದು ಅರ್ಥವೇ?. ಒಂದು ವೇಳೆ ನಿರ್ದಿಷ್ಟ ರಾಜ್ಯವನ್ನು ಭಾಷಣದಲ್ಲಿ ಹೆಸರಿಸಿದರೆ ಮಾತ್ರವೇ, ಭಾರತ ಸರಕಾರದ ಕಾರ್ಯಕ್ರಮಗಳು ಆ ರಾಜ್ಯಕ್ಕೆ ಹೋಗುತ್ತವೆ ಎಂದಾಯಿತೇ’’ ಎಂದು ನಿರ್ಮಲಾ ಪ್ರಶ್ನಿಸಿದರು.
ಬಜೆಟ್ ‘ತಾರತಮ್ಯ’: ರಾಜ್ಯಸಭೆಯಲ್ಲಿ ವಿಪಕ್ಷ ಸಭಾತ್ಯಾಗ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ 2024-25ರ ಸಾಲಿನ ಕೇಂದ್ರ ಬಜೆಟ್ನಲ್ಲಿ ಪ್ರತಿಪಕ್ಷ ಆಳ್ವಿಕೆಯ ರಾಜ್ಯಗಳಿಗೆ ತಾರತಮ್ಯ ಮಾಡಲಾಗಿದೆಯೆಂದು ಆರೋಪಿಸಿ ವಿಪಕ್ಷ ಸದಸ್ಯರು ಬುಧವಾರ ರಾಜ್ಯಸಭೆಯಲ್ಲಿ ಸಭಾತ್ಯಾಗ ಮಾಡಿದರು.
ಬಜೆಟ್ ತಾರತಮ್ಯ : ‘ ಇಂಡಿಯಾ’ ಪ್ರತಿಭಟನೆ
ಪ್ರತಿಪಕ್ಷಗಳ ಆಳ್ವಿಕೆಯ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ತಾರತಮ್ಯ ಮಾಡಲಾಗಿದೆಯೆಂದು ಆಪಾದಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಸಂಸತ್ಭವನದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಸೇರಿದಂತೆ ಪ್ರತಿಪಕ್ಷ ನಾಯಕರು ಹಾಗೂ ಇಂಡಿಯಾ ಮೈತ್ರಿಕೂಟದ ಇತರ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರಕಾರವು . ಎಲ್ಲಾ ರಾಜ್ಯಗಳನ್ನು ಸಮಾನವಾಗಿ ನಡೆಸಿಕೊಳ್ಳಬೇಕೆಂದು ಅವರು ಆಗ್ರಹಿಸಿದರು. ‘ನಮಗೆ ಭಾರತದ ಬಜೆಟ್ ಬೇಕಾಗಿದೆಯೇ ಹೊರತು, ಎನ್ಡಿಎ ಬಜೆಟ್ ಅಲ್ಲ’’, ‘ ಬಜೆಟ್ನಲ್ಲಿ ಭಾರತವನ್ನು ಎನ್ಡಿಎ ಕಡೆuಟಿಜeಜಿiಟಿeಜಗಣಿಸಿದೆ’ ಎಂಬ ಘೋಷಣೆಯ ಫಲಕಗಳನ್ನು ಅವರು ಹಿಡಿದಿದ್ದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಖರ್ಗೆ ಅವರು‘‘ ಈ ಬಜೆಟ್ ಜನವಿರೋಧಿಯಾಗಿದೆ. ಯಾರಿಗೂ ನ್ಯಾಯ ದೊರೆತಿಲ್ಲ. ವಿಶೇಷ ಪ್ಯಾಕೇಜ್ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಆದರೆ ವಿಶೇಷ ಸ್ಥಾನಮಾನವನ್ನು ನೀಡಿಲ್ಲ. ಇದೊಂದು ವಂಚನೆಯ ಬಜೆಟ್ ಆಗಿದೆ. ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಅವರು ಬಜೆಟನ್ನು ತೀವ್ರವಾಗಿ ಟೀಕಿಸಿದ್ದು, ಹಣದುಬ್ಬರವನ್ನು ಕಡಿಮೆಗೊಳಿಸುವಲ್ಲಿ ಸರಕಾರ ವಿಫಲವಾಗಿದೆ ಎಂದರು.
ರೈತರ ಉತ್ಪನ್ನಗಳಿಹಗೆ ಕನಿಷ್ಠ ಬೆಂಬಲ ಬೆಲೆ ದೊರೆಯಬೇಕೆಂದು ನಾವು ಆಗ್ರಹಿಸಿದ್ದೆವು.ಆ ದರೆ ರೈತರ ಬದಲಿಗೆ ತಮ್ಮ ಮೈತ್ರಿಕೂಟದ ಪಾಲುದಾರರಿಗೆ ಬೆಂಬಲ ದರವನ್ನು ನೀಲಾಗಿದೆ ಹಣದುಬ್ಬರದ ಕುರಿತು ಯಾವುದೇ ದೃಢವಾದ ಹೆಜ್ಜೆಗಳನ್ನು ಸರಕಾರವು ಇರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದರು.
ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, 2024-25ರ ಸಾಲಿನ ಬಜೆಟ್ ಪ್ರಧಾನಿ ಮಹಾರಾಷ್ಟ್ರ ವಿರೋಧಿ ಯೋಜನೆಯಾಗಿದೆ ಎಂದು ಟೀಕಿಸಿದರು. ಮಹಾರಾಷ್ಟ್ರವು ಗರಿಷ್ಠ ತೆರಿಗೆಯನ್ನು ಪಾವತಿಸುವ ರಾಜ್ಯವಾಗಿದ್ದರೂ, ಇದಕ್ಕೆ ಪ್ರತಿಫಲವಾಗಿ ರಾಜ್ಯಕ್ಕೆ ಏನೂ ದೊರೆತಿಲ್ಲ’’ ಎಂದರು.
ಖರ್ಗೆ ನಿವಾಸದಲ್ಲಿ ಮಂಗಳವಾರ ನಡೆದ ಇಂಡಿಯಾ ಮೈತ್ರಿಕೂಟದ ಮುಖಂಡರ ಸಭೆಯಲ್ಲಿ ಕೇಂದ್ರ ಬಜೆಟ್ ವಿರುದ್ಧ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.