×
Ad

ಲೈಂಗಿಕ ಕಿರುಕುಳ ಪ್ರಕರಣ | ನಟ ಇಡೆವೇಳ ಬಾಬು ಬಂಧನ, ಬಿಡುಗಡೆ

Update: 2024-09-25 22:31 IST

ಇಡೆವೇಳ ಬಾಬು | PC : X 

ತಿರುವನಂತಪುರ : ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿ ನಟ ಹಾಗೂ ಮಲೆಯಾಳಂ ಚಿತ್ರ ಕಲಾವಿದರ ಸಂಘ (ಅಮ್ಮಾ)ದ ಮಾಜಿ ಪ್ರಧಾನ ಕಾರ್ಯದರ್ಶಿ ಬಾಬು ಆಲಿಯಾಸ್ ಇಡವೇಳ ಬಾಬು ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ನಟ-ರಾಜಕಾರಣಿ ಹಾಗೂ ಸಿಪಿಎಂ ಶಾಸಕ ಎಂ. ಮುಖೇಶ್ ಅವರನ್ನು ಮಂಗಳವಾರ ಬಂಧಿಸಲಾಗಿತ್ತು. ಕೇರಳ ಉಚ್ಛ ನ್ಯಾಯಾಲಯ ಜಾಮೀನು ನಿರಾಕರಿಸಿದ ಬಳಿಕ ನಟ ಸಿದ್ದೀಕ್ ತಲೆ ಮರೆಸಿಕೊಂಡಿದ್ದಾರೆ.

ಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಹಾಗೂ ತಾರತಮ್ಯವನ್ನು ಹೇಮಾ ಸಮಿತಿ ವರದಿ ಬಹಿರಂಗಪಡಿಸಿದ ಬಳಿಕ ಈ ನಟರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

ವಿಸ್ತೃತ ವಿಚಾರಣೆ ನಡೆಸಿದ ಬಳಿಕ ವಿಶೇಷ ತನಿಖಾ ತಂಡ ಬಾಬು ಅವರನ್ನು ಬಂಧಿಸಿತ್ತು. ಅವರು ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರಿಂದ ಅನಂತರ ಅವರನ್ನು ಬಿಡುಗಡೆಗೊಳಿಸಿತು.

‘ಅಮ್ಮಾ’ದಲ್ಲಿ ಸದಸ್ಯತ್ವ ಕೋರಿ ತನ್ನನ್ನು ಸಂಪರ್ಕಿಸಿದ ನಟಿಗೆ ಬಾಬು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News