×
Ad

ಹಿಂದಿ ಭಾಷೆಯ ಪರ ಪವನ್ ಕಲ್ಯಾಣ್ ಹೇಳಿಕೆ: ನಟ ಪ್ರಕಾಶ್ ರಾಜ್ ತರಾಟೆ

Update: 2025-03-15 21:34 IST

 ನಟ ಪ್ರಕಾಶ್ ರಾಜ್ , ಪವನ್ ಕಲ್ಯಾಣ್ | PC : PTI 

ಬೆಂಗಳೂರು: ಹಿಂದಿ ಭಾಷೆಯ ಪರ ಹೇಳಿಕೆ ನೀಡಿರುವ ಪವನ್ ಕಲ್ಯಾಣ್ ಅವರನ್ನು ನಟ ಹಾಗೂ ರಾಜಕಾರಣಿ ಪ್ರಕಾಶ್ ರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಕಾಶ್ ರಾಜ್ ಅವರು ಶನಿವಾರ ತನ್ನ ‘ಎಕ್ಸ್’ನ ಖಾತೆಯಲ್ಲಿ ಇತರರ ಮೇಲೆ ಹಿಂದಿ ಹೇರಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ಪೋಸ್ಟ್‌ನಲ್ಲಿ ಪ್ರಕಾಶ್ ರಾಜ್, ‘‘ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ. ಇದು ಇನ್ನೊಂದು ಭಾಷೆಯನ್ನು ದ್ವೇಷಿಸುವ ವಿಚಾರ ಅಲ್ಲ. ಇದು ನಮ್ಮ ಮಾತೃ ಭಾಷೆ ಹಾಗೂ ಸ್ವ ಗೌರವದೊಂದಿಗೆ ನಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ರಕ್ಷಿಸುವ ವಿಚಾರ. ದಯವಿಟ್ಟು ಯಾರಾದರು ಪವನ್ ಕಲ್ಯಾಣ್ ಗುರುಗೆ ವಿವರಿಸಿ’’ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News