×
Ad

ಮುಂಬೈ ವಿಮಾನ ನಿಲ್ದಾಣಕ್ಕಾಗಿ 8,612 ಕೋಟಿ ರೂ. ಹಣಕಾಸು ನೆರವು ಪಡೆದ ಅದಾನಿ ಏರ್‌ಪೋರ್ಟ್ಸ್

Update: 2025-06-24 15:02 IST

PC : X 

ಹೊಸದಿಲ್ಲಿ: ಅದಾನಿ ಎಂಟರ್‌ಪ್ರೈಸಸ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಹಾಗೂ ಭಾರತದ ಅತಿದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಸಂಸ್ಥೆಯಾಗಿರುವ ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್(ಎಎಎಚ್‌ಎಲ್) ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಜಾಗತಿಕ ಹೂಡಿಕೆದಾರರಿಂದ 8,612 ಕೋಟಿ ರೂ.( ಒಂದು ಶತಕೋಟಿ ಡಾಲರ್) ಗಳ ಹಣಕಾಸು ನೆರವಿಗಾಗಿ ಒಪ್ಪಂದವನ್ನು ಮಾಡಿಕೊಂಡಿದೆ. ಬ್ಲ್ಯಾಕ್‌ರಾಕ್ ನಿರ್ವಹಣೆಯ ಫಂಡ್‌ಗಳು,‌ ಸ್ಟ್ಯಾಂಡರ್ಡ್ ಚಾರ್ಟರ್ಡ್ ಇತ್ಯಾದಿಗಳು ಸೇರಿದಂತೆ ಪ್ರಮುಖ ಸಾಂಸ್ಥಿಕ ಹೂಡಿಕೆದಾರರ ಕೂಟ ಮತ್ತು ವಿಮಾ ಕಂಪನಿಗಳ ಸಹಭಾಗಿತ್ವದಲ್ಲಿ ಅಪೋಲೊ ನಿರ್ವಹಿಸುವ ಫಂಡ್‌ಗಳು ಈ ವಹಿವಾಟಿನ ನೇತೃತ್ವವನ್ನು ವಹಿಸಿವೆ. ಇದು ಭಾರತದ ಮೂಲಸೌಕರ್ಯ ವಲಯದಲ್ಲಿ ಮತ್ತು ಅದಾನಿ ಏರ್‌ಪೋರ್ಟ್ಸ್‌ನ ಕಾರ್ಯಾಚರಣೆಗಳಲ್ಲಿ ಜಾಗತಿಕ ವಿಶ್ವಾಸವನ್ನು ತೋರಿಸುತ್ತದೆ ಎಂದು ಅದಾನಿ ಗ್ರೂಪ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಒಪ್ಪಂದವು 6,459 ಕೋಟಿ ರೂ.(750 ಮಿಲಿಯನ್ ಡಾಲರ್)ಗಳ ಬಾಂಡ್‌ಗಳ ವಿತರಣೆಯನ್ನು ಒಳಗೊಂಡಿದ್ದು,‌ ಇವು ಜುಲೈ 2029ರಲ್ಲಿ ಪಕ್ವಗೊಳ್ಳುತ್ತವೆ. ಈ ಹಣವನ್ನು ಸಾಲ ಮರುಪಾವತಿಗಾಗಿ ಬಳಸಲಾಗುತ್ತದೆ. ಹೆಚ್ಚುವರಿಯಾಗಿ 2,513 ಕೋಟಿ ರೂ.(250 ಮಿಲಿಯನ್ ಡಾಲರ್) ಪಡೆದುಕೊಳ್ಳಲು ಒಪ್ಪಂದದಲ್ಲಿ ಅವಕಾಶವಿದೆ,‌ ತನ್ಮೂಲಕ ಎಎಎಚ್‌ಎಲ್‌ಗೆ ಒಟ್ಟು 8,612 ಕೋಟಿ ರೂ.( ಒಂದು ಶತಕೋಟಿ ಡಾಲರ್)ಗಳು ಲಭ್ಯವಾಗುತ್ತವೆ.

ಅಭಿವೃದ್ಧಿ,‌ ಆಧುನೀಕರಣ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಂಡವಾಳ ವೆಚ್ಚ ಯೋಜನೆಗಳಿಗೆ ಈ ಒಪ್ಪಂದವು ಹೆಚ್ಚಿನ ಹಣಕಾಸಿನ ಅನುಕೂಲವನ್ನು ಒದಗಿಸುತ್ತದೆ ಎಂದು ಅದಾನಿ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನ ನಿಲ್ದಾಣ ಮೂಲಸೌಕರ್ಯ ವಲಯದಲ್ಲಿ ಇದು ಭಾರತದ ಮೊದಲ ಹೂಡಿಕೆ ದರ್ಜೆ(ಐಜಿ) ರೇಟಿಂಗ್ ಪಡೆದ ಖಾಸಗಿ ಬಾಂಡ್ ವಿತರಣೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News