ಚತ್ತೀಸ್‌ಗಢ: ಈಡೇರದ ಭರವಸೆ ; ಆರ್‌ಆರ್‌ವಿಯುಎನ್‌ಎಲ್, ಅದಾನಿ ಸಮೂಹದ ವಿರುದ್ಧ ಗ್ರಾಮಸ್ಥರಿಂದ ಪ್ರತಿಭಟನೆ
PC : newindianexpress.com
ರಾಯಪುರ: ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಇಲ್ಲಿನ ಅಂಬಿಕಾಪುರದ ಗ್ರಾಮಸ್ಥರು ಬುಧವಾರ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ್ ಲಿಮಿಡೆಡ್ (ಆರ್‌ಆರ್‌ವಿಯುಎನ್‌ಎಲ್) ಹಾಗೂ ಅದಾನಿ ಸಮೂಹದ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದ್ದಾರೆ.
ರಾಯಪುರದಿಂದ 330 ಕಿ.ಮೀ. ಉತ್ತರಕ್ಕಿರುವ ಅಂಬಿಕಾಪುರದ ರಸ್ತೆ, ರೈಲು ಮಾರ್ಗವಾಗಿ ಸಾಗಾಟ ಮಾಡುತ್ತಿದ್ದ ಕಲ್ಲಿದ್ದಲನ್ನು ಪ್ರಾದೇಶಿಕ ರಾಜಕೀಯ ಸಂಘಟನೆ ಗೊಂಡ್ವಾನ ಗಣತಂತ್ರ ಪಾರ್ಟಿ (ಜಿಜಿಪಿ) ನೇತೃತ್ವದಲ್ಲಿ ಸ್ಥಳೀಯ ಬುಡಕಟ್ಟು ಗ್ರಾಮಸ್ಥರು ತಡೆ ಹಿಡಿದಿದ್ದಾರೆ.
ಪ್ರತಿಭಟನಕಾರರು ರಸ್ತೆಯಲ್ಲಿ ಕಲ್ಲಿದ್ದಲು ಸಾಗಾಟಕ್ಕೆ ಅಡ್ಡಿ ಉಂಟು ಮಾಡಿರುವುದೇ ಅಲ್ಲದೆ, ಕಲ್ಲಿದ್ದಲು ಸಾಗಾಟ ತಡೆಯಲು ರೈಲು ಹಳಿಗಳಲ್ಲಿ ಕಲ್ಲುಗಳನ್ನು ಕೂಡ ಇರಿಸಿದ್ದಾರೆ.
ಉತ್ತರ ಚತ್ತೀಸ್‌ಗಢದ ಅಂಬಿಕಾಪುರದ ಪರ್ಸಾ ಪೂರ್ವ-ಕೆಂಟೆ ಬಸನ್ ಕಲ್ಲಿದ್ದಲು ಬ್ಲಾಕ್ ಅನ್ನು ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ್ ಲಿಮಿಡೆಡ್‌ಗೆ ನೀಡಲಾಗಿದೆ. ಈ ಸಂಸ್ಥೆಯೊಂದಿಗೆ ಅದಾನಿ ಸಮೂಹ ಗಣಿ ಅಭಿವೃದ್ಧಿ ಹಾಗೂ ಕಾರ್ಯನಿರ್ವಹಣೆ ಒಪ್ಪಂದಕ್ಕೆ ಸಹಿ ಹಾಕಿದೆ.
ಪ್ರತಿಭಟನಾ ರ‍್ಯಾಲಿ ಹಾಗೂ ದರಣಿ ಸಂದರ್ಭ ಪೊಲೀಸರು ಹಾಗೂ ಆಡಳಿತಾಧಿಕಾರಿಗಳನ್ನು ನಿಯೋಜಿಸಲಾಗಿತ್ತು.