×
Ad

ಇರಾನ್-ಇಸ್ರೇಲ್ ಸಂಘರ್ಷ | ಪರ್ಶಿಯನ್ ಕೊಲ್ಲಿ ವಾಯು ಪ್ರದೇಶವನ್ನು ತಪ್ಪಿಸಲು ಮಾರ್ಗ ಬದಲಾವಣೆ; ಏರ್ ಇಂಡಿಯಾ ವಿಮಾನ ವಿಳಂಬ

Update: 2025-06-22 21:36 IST

 ಏರ್ ಇಂಡಿಯಾ | PC: X \ @airindia

ಹೊಸದಿಲ್ಲಿ: ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ಪರ್ಶಿಯನ್ ಕೊಲ್ಲಿ ವಾಯು ಪ್ರದೇಶವನ್ನು ತಪ್ಪಿಸಲು ಇರಾನ್, ಇರಾಕ್ ಹಾಗೂ ಇಸ್ರೇಲ್ ವಾಯು ಪ್ರದೇಶಗಳಲ್ಲ ಸದ್ಯ ತನ್ನ ವೈಮಾನಿಕ ಕಾರ್ಯಾಚರಣೆಗಳನ್ನು ನಡೆಸುವುದಿಲ್ಲ ಎಂದು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ಪ್ರಕಟಿಸಿದೆ.

ಈ ಸಂಬಂಧ ಶನಿವಾರ ಏರ್ ಇಂಡಿಯಾ ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಪರ್ಶಿಯನ್ ಕೊಲ್ಲಿ ವಾಯು ಪ್ರದೇಶದ ನಿರ್ದಿಷ್ಟ ಪ್ರದೇಶಗಳನ್ನು ಹಂತಹಂತವಾಗಿ ತಪ್ಪಿಸಲಾಗುವುದು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಈ ನಿರ್ಧಾರದಿಂದಾಗಿ, ಯುಎಇ, ಖತರ್, ಒಮಾನ್ ಹಾಗೂ ಕುವೈತ್ ಸೇರಿದಂತೆ ವಿವಿಧ ಮಧ್ಯಪ್ರಾಚ್ಯ ದೇಶಗಳಿಗೆ ಕಾರ್ಯಾಚರಣೆ ನಡೆಸಬೇಕಿದ್ದ ವಿಮಾನ ಯಾನಗಳ ಸೇವೆಯ ಮೇಲೆ ಪರಿಣಾಮವುಂಟಾಗಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಏರ್ ಇಂಡಿಯಾ ವಕ್ತಾರರು, “ಕ್ರಿಯಾಶೀಲ ಕ್ರಮದ ಭಾಗವಾಗಿ, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಪರ್ಶಿಯನ್ ಕೊಲ್ಲಿ ವಾಯು ಪ್ರದೇಶವನ್ನು ತಪ್ಪಿಸಲಿದ್ದು, ಯುಎಇ, ಖತರ್, ಒಮನ್ ಹಾಗೂ ಕುವೈತ್ ಸೇರಿದಂತೆ ಈ ವಾಯು ಪ್ರದೇಶಗಳಲ್ಲಿ ಪರ್ಯಾಯ ಮಾರ್ಗಗಳನ್ನು ಆಯ್ದುಕೊಳ್ಳಲಾಗುವುದು” ಎಂದು ಹೇಳಿದ್ದಾರೆ.

ಈ ಮಾರ್ಗಗಳನ್ನು ಮರುರೂಪಿಸಿರುವುದರಿಂದ, ಈ ಮಾರ್ಗಗಳಲ್ಲಿನ ವಿಮಾನ ಯಾನದ ಅವಧಿ ದೀರ್ಘವಾಗಲಿದ್ದು, ಯೂರೋಪ್ ಹಾಗೂ ಉತ್ತರ ಅಮೆರಿಕದಿಂದ ಕಾರ್ಯಾಚರಿಸಲಿರುವ ಆಯ್ದ ವಿಮಾನ ಯಾನ ಸೇವೆಗಳ ಅವಧಿಯೂ ದೀರ್ಘವಾಗಲಿದೆ ಎಂದು ಹೇಳಲಾಗಿದೆ.

ನಾವು ವಿದೇಶಾಂಗ ಭದ್ರತಾ ಸಲಹೆಗಾರರೊಂದಿಗೆ ನಿಕಟವಾಗಿ ಕಾರ್ಯಾಚರಿಸುತ್ತಿದ್ದು, ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ಉದ್ಭವಿಸುತ್ತಿರುವ ಪರಿಸ್ಥಿತಿಯ ಮೇಲೆ ನಿರಂತರವಾಗಿ ನಿಗಾ ವಹಿಸಲಾಗಿದೆ. ಅಗತ್ಯತೆ ಬಿದ್ದರೆ, ನಾವು ನಮ್ಮ ಕಾರ್ಯಾಚರಣೆಗಳ ಸುರಕ್ಷತೆ ಹಾಗೂ ಸಮಗ್ರತೆಯನ್ನು ಎತ್ತಿ ಹಿಡಿಯಲು ಹೆಚ್ಚುವರಿ ಕ್ರಮಗಳನ್ನು ಜಾರಿಗೊಳಿಸಲು ಸಿದ್ಧರಿದ್ದೇವೆ” ಎಂದು ಈ ಪ್ರಕಟನೆಯಲ್ಲಿ ಭರವಸೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News