×
Ad

ಈ ವರ್ಷದ ಜುಲೈ 20ರವರೆಗೆ ವಿಮಾನಯಾನ ಸಂಸ್ಥೆಗಳಿಗೆ 69 ಹುಸಿ ಬಾಂಬ್ ಬೆದರಿಕೆ ಕರೆಗಳು: ಕೇಂದ್ರ ಸರಕಾರ

Update: 2025-07-24 23:41 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಈ ವರ್ಷದ ಜುಲೈ 20ರವರೆಗೆ ವಿಮಾನ ಯಾನ ಸಂಸ್ಥೆಗಳು ಒಟ್ಟು 69 ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ಗುರುವಾರ ಕೇಂದ್ರ ಸರಕಾರ ತಿಳಿಸಿದೆ.

ನಾಗರಿಕ ವಿಮಾನ ಯಾನ ಭದ್ರತಾ ದಳದ ದತ್ತಾಂಶದ ಪ್ರಕಾರ, 2022ರಿಂದ ಜುಲೈ 20, 2025ರವರೆಗೆ ವಿಮಾನಯಾನ ಸಂಸ್ಥೆಗಳು ಒಟ್ಟು 881 ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿವೆ ಎಂದು ಹೇಳಲಾಗಿದೆ.

ಲೋಕಸಭೆಗೆ ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನ ಯಾನ ಸಚಿವ ಮುರಳೀಧರ್ ಮೊಹೋಲ್, ಕಾನೂನು ಜಾರಿ ಪ್ರಾಧಿಕಾರಗಳು, ಕೇಂದ್ರೀಯ ಭದ್ರತಾ ಸಂಸ್ಥೆಗಳು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಸಂಬಂಧಿಸಿದವರು ಸಮನ್ವಯದೊಂದಿಗೆ ಇಂತಹ ಬೆದರಿಕೆಗಳನ್ನು ಸದೃಢ ಶಿಷ್ಟಾಚಾರಗಳ ಮೂಲಕ ನಿಭಾಯಿಸಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಆ ಮೂಲಕ ವಿಮಾನ ಕಾರ್ಯಾಚರಣೆಗಳ ಮೇಲೆ ಕನಿಷ್ಠ ಪ್ರಮಾಣದ ಪರಿಣಾಮವಾಗಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಜುಲೈ 20ರವರೆಗೆ ಒಟ್ಟು 69 ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಲಾಗಿದ್ದು, ಕಳೆದ ವರ್ಷ (2024) ಈ ಸಂಖ್ಯೆ ಒಟ್ಟು 728 ಇತ್ತು ಎಂದು ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

2022 ಹಾಗೂ 2023ರಲ್ಲಿ ಕ್ರಮವಾಗಿ 13 ಹಾಗೂ 71 ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಸ್ವೀಕರಿಸಲಾಗಿತ್ತು ಎಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ಒದಗಿಸಲಾಗಿರುವ ದತ್ತಾಂಶದಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News