×
Ad

ಪ್ರಧಾನಿ ಮೋದಿ, ಭಾರತೀಯ ಸೇನೆಗೆ ಕೃತಜ್ಞತೆ ಸಲ್ಲಿಸಿದ ಪಹಲ್ಗಾಮ್ ಸಂತ್ರಸ್ತರೊಬ್ಬರ ಪತ್ನಿ ಐಶಾನ್ಯಾ ದ್ವಿವೇದಿ

Update: 2025-05-07 20:56 IST

 ಪ್ರಧಾನಿ ನರೇಂದ್ರ ಮೋದಿ | PC : PTI  

ಕಾನ್ಪುರ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟ ಉದ್ಯಮಿ ಶುಭಂ ದ್ವಿವೇದಿ(31) ಅವರ ಪತ್ನಿ ಐಶಾನ್ಯಾ ದ್ವಿವೇದಿ ಅವರು ‘ಆಪರೇಷನ್ ಸಿಂಧೂರ’ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿದ್ದಕ್ಕಾಗಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

‘ನನ್ನ ಪತಿಯ ಹತ್ಯೆಗೆ ಸೇಡು ತೀರಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಭಾರತೀಯ ಸೇನೆಗೆ ನನ್ನ ಕೃತಜ್ಞತೆಗಳು’ ಎಂದು ಅವರು ಹೇಳಿದರು.

‘ಆಪರೇಷನ್ ಸಿಂಧೂರ’ ಸುದ್ದಿಯು ವೈರಲ್ ಆದ ಬೆನ್ನಿಗೇ ಉತ್ತರ ಪ್ರದೇಶ ವಿಧಾನಸಭಾ ಸ್ಪೀಕರ್ ಹಾಗೂ ಮಹಾರಾಜಪುರ ಶಾಸಕ ಸತೀಶ್ ಮಹನಾ ಅವರು ನಸುಕಿನಲ್ಲಿ ಇಲ್ಲಿಯ ಶುಭಂ ದ್ವಿವೇದಿಯವರ ನಿವಾಸಕ್ಕೆ ಭೇಟಿ ನೀಡಿದರು.

ಪಾಕಿಸ್ತಾನದಲ್ಲಿಯ ಭಯೋತ್ಪಾದಕ ಶಿಬಿರಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆಯ ಕುರಿತು ಅವರು ದ್ವಿವೇದಿ ಕುಟುಂಬ ಮತ್ತು ಐಶಾನ್ಯಾ ಅವರಿಗೆ ವಿವರಿಸಿದರು.

ಬಿಕ್ಕುತ್ತಿದ್ದ ಐಶಾನ್ಯಾರನ್ನು ಮಹನಾ ಸಮಾಧಾನಿಸಿದರು. ‘ನಮ್ಮ ಇಡೀ ಕುಟುಂಬವು ಪ್ರಧಾನಿ ಮೋದಿಯವರಲ್ಲಿ ನಂಬಿಕೆಯನ್ನು ಹೊಂದಿತ್ತು ಮತ್ತು ಪಹಲ್ಗಾಮ್ ಹತ್ಯೆಗಳಿಗೆ ಸೇಡು ತೀರಿಸಿಕೊಂಡಿದ್ದು ಆ ನಂಬಿಕೆಯನ್ನು ಶಾಶ್ವತವಾಗಿ ಜೀವಂತವಾಗಿರಿಸುತ್ತದೆ ’ ಎಂದು ಐಶಾನ್ಯಾ ಹೇಳಿದರು.

‘ಇದು ಶುಭಂ ಅವರಿಗೆ ನಿಜವಾದ ಗೌರವವಾಗಿದೆ. ಅವರು ಎಲ್ಲೇ ಇದ್ದರೂ ಈಗ ಅವರ ಆತ್ಮಕ್ಕೆ ಶಾಂತಿ ಲಭಿಸುತ್ತದೆ’ ಎಂದರು.

ಭಾರತೀಯ ಸೇನೆಯ ಈ ಕ್ರಮವು ದೇಶದ ಆಡಳಿತದಲ್ಲಿ ನಂಬಿಕೆಯ ಭಾವನೆಯನ್ನು ಮೂಡಿಸಿದೆ ಎಂದು ಹೇಳಿದ ಶುರ್ಭ ತಂದೆ ಸಂಜಯ ದ್ವಿವೇದಿಯವರು,‘ನಾನು ನಿರಂತರವಾಗಿ ಸುದ್ದಿಗಳನ್ನು ವೀಕ್ಷಿಸುತ್ತಿದ್ದೇನೆ. ಭಾರತೀಯ ಸೇನೆಗೆ ನನ್ನ ಸೆಲ್ಯೂಟ್ ಮತ್ತು ದೇಶದ ಜನತೆಯ ನೋವನ್ನು ಆಲಿಸಿದ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು. ಪಾಕಿಸ್ತಾನದಲ್ಲಿ ಹುಲುಸಾಗಿದ್ದ ಭಯೋತ್ಪಾದನೆಯನ್ನು ನಾಶಗೊಳಿಸಿದ ರೀತಿಗಾಗಿ ನಾನು ನಮ್ಮ ಸೇನೆಗೆ ಧನ್ಯವಾದಗಳನ್ನು ಹೇಳುತ್ತೇನೆ. ಈ ಸುದ್ದಿಯನ್ನು ಕೇಳಿದಾಗಿನಿಂದ ನಮ್ಮ ಕುಟುಂಬವು ಹಗುರವಾಗಿದೆ ’ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News