×
Ad

ಡಬಲ್ ಎಂಜಿನ್ ಸರಕಾರದ ಒಂದು ಎಂಜಿನ್ ವಿದೇಶದ್ದೇ?: ಅಖಿಲೇಶ್ ಟೀಕೆ

Update: 2025-02-23 22:52 IST

ಅಖಿಲೇಶ್ ಯಾದವ್ | PC : PTI 

ಹೊಸದಿಲ್ಲಿ: ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವನ್ನಾಗಿಸುವ ಬಿಜೆಪಿಯ ನಿರೂಪಣೆಯಲ್ಲಿ ಅಮೆರಿಕದಿಂದ ಬಂದಿರುವ 21 ಮಿಲಿಯ ಡಾಲರ್ ಕೂಡಾ ಸೇರಿದೆಯೇ ಎಂದು ಭಾರತದ ಜನತೆ ಪ್ರಶ್ನಿಸುತ್ತಿದ್ದಾರೆಂದು ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ರವಿವಾರ ಕೇಂದ್ರ ಸರಕಾರವನ್ನು ಟೀಕಿಸಿದ್ದಾರೆ.

ಭಾರತದಲ್ಲಿ ಮತದಾನವನ್ನು ಉತ್ತೇಜಿಸಲು 21 ಮಿಲಿಯ ಡಾಲರ್ ದೇಣಿಗೆಯನ್ನು ಅಮೆರಿಕ ನೀಡಿತ್ತೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ, ಅಖಿಲೇಶ್ ಅವರು ಎಕ್ಸ್‌ನಲ್ಲಿ ಈ ಟೀಕೆಯನ್ನು ಮಾಡಿದ್ದಾರೆ. ಡಬಲ್ ಎಂಜಿನ್ ಸರಕಾರದ ಒಂದು ಇಂಜಿನ್ ವಿದೇಶದ್ದೇ ಎಂದು ಜನರು ಅಚ್ಚರಿಯಿಂದ ಪ್ರಶ್ನಿಸುತ್ತಿದ್ದಾರೆ ಎಂದು ಅಖಿಲೇಶ್ ಅಣಕವಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ಶನಿವಾರ ನೀಡಿದ ಹೇಳಿಕೆಯೊಂದರಲ್ಲಿ ಭಾರತದಲ್ಲಿ ಮತದಾನವನ್ನು ಉತ್ತೇಜಿಸಲು ಅಮೆರಿಕದಿಂದ ನನ್ನ ಅತ್ಯುತ್ತಮ ಗೆಳೆಯ ನರೇಂದ್ರ ಮೋದಿ ಅವರಿಗೆ 21 ಮಿಲಿಯ ಡಾಲರ್ ಹೋಗಿದೆ ಎಂದು ಹೇಳಿದ್ದರು. ಇಂದು ಟ್ರಂಪ್ ಮತ್ತೆ ಈ ವಿಷಯವನ್ನು ಕೆದಕಿದ್ದು, ಬೈಡನ್ ಸರಕಾರವು ಭಾರತದಲ್ಲಿ ಮತದಾನ ಹೆಚ್ಚಳಕ್ಕಾಗಿ 18 ಮಿಲಿಯ ಡಾಲರ್‌ಗಳನ್ನು ನೀಡಿದೆಯೆಂದು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News