ಅಲಿಗಢ: 15 ವರ್ಷದ ಬಾಲಕನಿಗೆ ಗುಂಪಿನಿಂದ ಹಲ್ಲೆ; ಪಾಕ್ ರಾಷ್ಟ್ರಧ್ಜಜದ ಮೇಲೆ ಮೂತ್ರವಿಸರ್ಜಿಸುವಂತೆ ಬಲವಂತ
PC : X
ನೊಯ್ಡಾ: ಉತ್ತರಪ್ರದೇಶದ ಅಲಿಗಢ ಜಿಲ್ಲೆಯಲ್ಲಿ 15 ವರ್ಷ ವಯಸ್ಸಿನ ಮುಸ್ಲಿಂ ಬಾಲಕನೊಬ್ಬನಿಗೆ ಹಿಗ್ಗಾಮಗ್ಗಾ ಥಳಿಸಿ, ಪಾಕಿಸ್ತಾನದ ರಾಷ್ಟ್ರಧ್ವಜದ ಮೇಲೆ ಆತನನ್ನು ಬಲವಂತವಾಗಿ ಮೂತ್ರ ವಿಸರ್ಜಿಸುವಂತೆ ಮಾಡಿದ ಹಾಗೂ ಮುಸ್ಲಿಂ ಸಮುದಾಯವನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ವ್ಯಕ್ತಿಗಳ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಪುಸ್ತಕದ ಅಂಗಡಿ ಮಾಲಕ ರಾಜು, ದಿನಸಿ ಅಂಗಡಿ ಮಾಲಕ ನಿತಿನ್ ಹಾಗೂ ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯಶಾಸ್ತ್ರದ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಜನರ ಗುಂಪೊಂದು ರಸ್ತೆಯಲ್ಲಿ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಇರಿಸಿತ್ತು. 15 ವರ್ಷದ ಬಾಲಕ ಧ್ವಜವನ್ನು ಎತ್ತಿಕೊಂಡಾಗ, ಗುಂಪು ಆತನ ಮೇಲೆ ಹಲ್ಲೆ ನಡೆಸಿತು ಹಾಗೂ ಆತನನ್ನು ಬಲವಂತವಾಗಿ ಪಾಕ್ ಧ್ವಜದ ಮೇಲೆ ಮೂತ್ರ ವಿಸರ್ಜಿಸುವಂತೆ ಮಾಡಿತು. 9ನೇ ತರಗತಿಯಲ್ಲಿ ಕಲಿಯುತ್ತಿದ್ದ ಈ ಬಾಲಕ ಶಾಲೆಯಿಂದ ಸ್ನೇಹಿತರೊಂದಿಗೆ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದ್ದೆಂದು ಹೇಳಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಬಾಲಕನೊಬ್ಬನನ್ನು ಸುತ್ತುವರಿದ ವ್ಯಕ್ತಿಗಳು, ಹಿಂದೂಸ್ತಾನ್ ಜಿಂದಾಬಾದ್ ಹಾಗೂ ಭಾರತ್ ಮಾತಾ ಕೀ ಜೈ ಎಂದು ಘೋಷಣೆಗಳನ್ನು ಕೂಗುವಂತೆ ಬಲವಂತಪಡಿಸುತ್ತಿರುವುದು ಕಾಣಿಸಿದೆ. ಅಲ್ಲದೆ ಆತನನ್ನು ದೂಡಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡುಬಂದಿದೆ. ಬಾಲಕನು ಪಾಕ್ ರಾಷ್ಟ್ರಧ್ವಜವನ್ನು ರಸ್ತೆಯಲ್ಲಿ ಇರಿಸುತ್ತಿರುವುದನ್ನು ಮತ್ತು ಆದರ ಮೇಲೆ ಮೂತ್ರ ವಿಸರ್ಜಿಸುವುದು ಕೂಡಾ ವೀಡಿಯೊದಲ್ಲಿ ಕಾಣಿಸಿದೆ.
कक्षा 9 में पढ़ने वाले छात्र बुरहान का कॉलर पकड़कर धमकाने और जबरन पाकिस्तानी झंडे पर पेशाब करवाने का आरोप ।
— IND Story's (@INDStoryS) April 29, 2025
अलीगढ़ : रसूलगंज इलाके में कक्षा 9 में पढ़ने वाले छात्र बुरहान को कुछ कथित हिंदुत्व समर्थकों द्वारा पकड़कर उसका कॉलर पकड़कर धमकाने और जबरन पाकिस्तानी झंडे पर पेशाब… pic.twitter.com/r2vd2uqVQT