×
Ad

ಮಸೀದಿ ಧ್ವಂಸ ಕುರಿತ ವರದಿ | ಬಿಬಿಸಿ ಪತ್ರಕರ್ತ ಸಿರಾಜ್ ಅಲಿ ವಿರುದ್ಧದ ಆದೇಶಗಳನ್ನು ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್

Update: 2025-06-08 22:49 IST

ಸಿರಾಜ್ ಅಲಿ

ಅಲಹಾಬಾದ್: ಉತ್ತರಪ್ರದೇಶದ ಬಾರಾಬಂಕಿಯ ಮಸೀದಿಯೊಂದನ್ನು ನೆಲಸಮಗೊಳಿಸಿದ ಘಟನೆಯ ಬಗ್ಗೆ ವರದಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಬಿಸಿ ಪತ್ರಕರ್ತ ಮುಹಮ್ಮದ್ ಸಿರಾಜ್ ಅಲಿ ವಿರುದ್ಧ ವಿಚಾರಣಾ ನ್ಯಾಯಾಲಯ ನೀಡಿರುವ ಎರಡು ಆದೇಶಗಳನ್ನು ಅಲಹಾಬಾದ್ ಹೈಕೋರ್ಟ್ ರದ್ದುಪಡಿಸಿದೆ.

ಮುಹಮ್ಮದ್ ಸಿರಾಜ್ ಅವರ ಪಾಸ್‌ಪೋರ್ಟ್‌ ನವೀಕರಿಸುವುದಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಲು ಬಾರಾಬಂಕಿ ನ್ಯಾಯಾಲಯ ನಿರಾಕರಿಸಿತ್ತು. ಈ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಮುಹಮ್ಮದ್ ಸಿರಾಜ್ ಅಲಿ ಮತ್ತು ಪತ್ರಕರ್ತ ಮುಕುಲ್ ಚೌಹಾಣ್ ‘ದಿ ವೈರ್’ನಲ್ಲಿ ಕೆಲಸ ಮಾಡುತ್ತಿದ್ದಾಗ 2021ರ ಜೂನ್‌ನಲ್ಲಿ ಬಾರಾಬಂಕಿಯ ಮಸೀದಿಯೊಂದನ್ನು ಜಿಲ್ಲಾಡಳಿತ ನೆಲಸಮಗೊಳಿಸಿದ ಘಟನೆಯ ವೀಡಿಯೊ ವರದಿಯನ್ನು ಮಾಡಿದ್ದರು. ಈ ಬಗ್ಗೆ ಮುಹಮ್ಮದ್ ಸಿರಾಜ್ ಮತ್ತು ಪತ್ರಕರ್ತ ಮುಕುಲ್ ಚೌಹಾಣ್ ವಿರುದ್ಧ ಪ್ರಕರಣ ದಾಖಲಾಗಿತ್ತು.

2021ರ ಮೇ ತಿಂಗಳಲ್ಲಿ ರಾಮ್ ಸನೇಹಿ ಘಾಟ್‌ನಲ್ಲಿರುವ ಮಸೀದಿಯನ್ನು ಅಕ್ರಮ ನಿರ್ಮಾಣವೆಂದು ಜಿಲ್ಲಾಡಳಿತವು ಕೆಡವಿತ್ತು.

ಈ ಘಟನೆಯ ಬಗ್ಗೆ ವರದಿಯನ್ನು ಪ್ರಕಟಿಸುವ ಮೂಲಕ ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳು, ಪಂಗಡ ಇತ್ಯಾದಿಗಳ ನಡುವೆ ಶತ್ರುತ್ವವನ್ನು ಪ್ರಚೋದಿಸಿದ ಆರೋಪದಲ್ಲಿ ಅಲಿ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

2021ರ ಸೆಪ್ಟೆಂಬರ್‌ನಲ್ಲಿ ಅಲಿ ಬಿಬಿಸಿಗೆ ಸೇರ್ಪಡೆಗೊಂಡರು. ಇದಾದ ಒಂದು ವರ್ಷದ ಬಳಿಕ ಅವರ ವಿರುದ್ಧ ದೋಷಾರೋಪ ದಾಖಲಾಗಿತ್ತು ಮತ್ತು ವಿಚಾರಣಾ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು.

ಇದೇ ವೇಳೆ ಅಲಿ ಅವರು 2022ರಲ್ಲಿ ತನ್ನ ಪಾಸ್‌ಪೋರ್ಟ್‌ ನವೀಕರಣ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ, ಬಾರಾಬಂಕಿಯ ವಿಚಾರಣಾ ನ್ಯಾಯಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ತರುವಂತೆ ಕೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News