×
Ad

ಲಾರೆನ್ಸ್ ಬಿಷ್ಣೋಯಿ ಗುಂಪಿನ ಸದಸ್ಯ ಅಮನ್ ಭೈನ್ಸ್ವಾಲ್ ಅಮೆರಿಕದಿಂದ ಗಡಿಪಾರು

ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧನ

Update: 2026-01-07 21:37 IST

 ಅಮನ್ ಭೈನ್ಸ್ವಾಲ್ | Photo Credit : X \ @ians_india

ಚಂಡಿಗಢ: ಲಾರನ್ಸ್ ಬಿಷ್ಣೋಯಿ ಗುಂಪಿನ ಪ್ರಮುಖ ಸದಸ್ಯನನ್ನು ಅಮೆರಿಕದಿಂದ ಗಡಿಪಾರು ಮಾಡಿದ ಬಳಿಕ ದಿಲ್ಲಿ ವಿಮಾನ ನಿಲ್ದಾಣದಿಂದ ಬುಧವಾರ ಬಂಧಿಸಲಾಗಿದೆ.

ಅಮನ್ ಆಲಿಯಾಸ್ ಅಮನ್ ಕುಮಾರ್ ಆಲಿಯಾಸ್ ಅಮನ್ ಭೈನ್ಸ್ವಾಲ್ ಹತ್ಯೆ, ಗಲಭೆ, ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ ಹರ್ಯಾಣ ಪೊಲೀಸರಿಗೆ ಬೇಕಾದವನಾಗಿದ್ದ. ಆತನನ್ನು ಸಿಬಿಐ ಅಮೆರಿಕದಿಂದ ವಾಪಸ್ ಕರೆಸಿಕೊಂಡಿದೆ.

ಹರ್ಯಾಣ ಪೊಲೀಸರ ಮನವಿಯ ಮೇರೆಗೆ ಸಿಬಿಐ ಭೈನ್ಸ್ವಾಲ್ ವಿರುದ್ಧ ಇಂಟರ್ ಪೋಲ್ ರೆಡ್ ನೋಟಿಸ್ ಪಡೆದುಕೊಂಡಿತ್ತು. ನೋಟಿಸಿನ ಆಧಾರದಲ್ಲಿ ಆತನನ್ನು ಅಮೆರಿಕದಲ್ಲಿ ಪತ್ತೆ ಮಾಡಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಗೃಹ ವ್ಯವಹಾರಗಳ ಸಚಿವಾಲಯ ಆತನನ್ನು ಭಾರತಕ್ಕೆ ಕರೆದುಕೊಂಡು ಬರಲು ನೆರವು ನೀಡಿತು.

ಹೇಳಿಕೆಯಲ್ಲಿ ಸಿಬಿಐ, ಭೈನ್ಸ್ವಾಲ್‌ನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಆತ ಬುಧವಾರ ಆಗಮಿಸಿದ. ದಿಲ್ಲಿ ವಿಮಾನ ನಿಲ್ದಾಣದಿಂದ ಆತನನ್ನು ಹರ್ಯಾಣ ಪೊಲೀಸರ ತಂಡ ವಶಕ್ಕೆ ತೆಗೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News