×
Ad

ಶಂಕಿತ ಉಗ್ರರ ಮೃತದೇಹ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್‌ಗೆ ಅಪರಿಚಿತ ವಾಹನ ಢಿಕ್ಕಿ

Update: 2024-12-25 20:04 IST

PC : indiatoday.in

ರಾಮಪುರ (ಉತ್ತರಪ್ರದೇಶ) : ಉತ್ತರಪ್ರದೇಶದ ಫಿಲಿಬಿಟ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಹತರಾದ ಖಾಲಿಸ್ತಾನ್ ಜಿಂದಾಬಾದ್ ಪಡೆಯ ಮೂವರು ಶಂಕಿತ ಉಗ್ರರ ಮೃತದೇಹಗಳನ್ನು ಪಂಜಾಬ್‌ ಗೆ ಕೊಡೊಯ್ಯುತ್ತಿದ್ದ ಆ್ಯಂಬುಲೆನ್ಸ್‌ಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ರಾಮ್‌ಪುರ ಬೈಪಾಸ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ, ಆ್ಯಂಬುಲೆನ್ಸ್ ಜಖಂಗೊಂಡಿತು.

ಆದುದರಿಂದ ಮೃತದೇಹಗಳನ್ನು ಇನ್ನೊಂದು ವಾಹನಕ್ಕೆ ವರ್ಗಾಯಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಮೂವರು ಶಂಕಿತ ಉಗ್ರರ ಮೃತದೇಹಗಳನ್ನು ಫಿಲಿಬಿಟ್‌ನಿಂದ ಪಂಜಾಬ್‌ಗೆ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್‌ಗೆ ರಾಮ್‌ಪುರ ಬೈಪಾಸ್‌ನಲ್ಲಿ ಮಂಗಳವಾರ ರಾತ್ರಿ ಅಪರಿಚಿತ ವಾಹನ ಢಿಕ್ಕಿ ಹೊಡೆಯಿತು ಎಂದು ಪೊಲೀಸ್ ಅಧೀಕ್ಷಕ ವಿದ್ಯಾಸಾಗರ್ ಮಿಶ್ರಾ ಹೇಳಿದ್ದಾರೆ.

ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ರಾಮ್‌ಪುರ ಪೊಲೀಸರು ಸ್ಥಳಕ್ಕೆ ಧಾವಿಸಿದರು ಹಾಗೂ ಜಖಂಗೊಂಡ ಆ್ಯಂಬುಲೆನ್ಸ್‌ನಿಂದ ಮೃತದೇಹಗಳನ್ನು ಇನ್ನೊಂದು ಆ್ಯಂಬುಲೆನ್ಸ್‌ಗೆ ವರ್ಗಾಯಿಸಿದರು ಎಂದು ಅವರು ತಿಳಿಸಿದ್ದಾರೆ.

ಫಿಲಿಬಿಟ್‌ನ ಪುರಾನ್‌ಪುರದಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಗುರುದಾಸ್‌ಪುರ ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ ನಡೆಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಮೂವರು ಶಂಕಿತ ಉಗ್ರರನ್ನು ಪಂಜಾಬ್ ಪೊಲೀಸ್ ಹಾಗೂ ಉತ್ತರಪ್ರದೇಶ ಪೊಲೀಸರ ಜಂಟಿ ತಂಡ ಹತ್ಯೆಗೈದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News