×
Ad

ಮುಸ್ಲಿಮೇತರರಲ್ಲಿ ಸುನ್ನತಿಯನ್ನು ಉತ್ತೇಜಿಸುತ್ತಿರುವ ಜಾಲ: ಮಾಜಿ ಸಿಬಿಐ ಮುಖ್ಯಸ್ಥರ ಪತ್ರದ ನಂತರ ಆಂಧ್ರ ಸರಕಾರದಿಂದ ತನಿಖೆ

Update: 2025-12-23 20:43 IST

ಸತ್ಯಕುಮಾರ್ ಯಾದವ್ , ನಾಗೇಶ್ವರ್ ರಾವ್ | Photo Credit : X/LinkedIn

ಹೈದರಾಬಾದ್: ಆಂಧ್ರ ರಾಜ್ಯದಲ್ಲಿ ಮುಸ್ಲಿಮೇತರ ಬಾಲಕರಲ್ಲಿ ಸುನ್ನತಿಯನ್ನು ಉತ್ತೇಜಿಸುತ್ತಿರುವ ಜಾಲವಿದೆ ಎಂದು ಮಾಜಿ ಸಿಬಿಐ ಮುಖ್ಯಸ್ಥ ನಾಗೇಶ್ವರ್ ರಾವ್ ಅವರು ಆಂಧ್ರಪ್ರದೇಶ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಅವರಿಗೆ ಪತ್ರ ಬರೆದಿದ್ದು, ಈ ಪತ್ರವನ್ನು ಅವರು ಎಕ್ಸ್‌ ನಲ್ಲೂ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಮಾಡಿದ ಕೇವಲ 30 ನಿಮಿಷಗಳೊಳಗೇ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್, ಈ ಆರೋಪಗಳ ಕುರಿತು ಇಲಾಖೆ ಪರಿಶೀಲಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಎನ್‌ಡಿಎ ಆಡಳಿತಾರೂಢ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಮುಸ್ಲಿಮೇತರ ಬಾಲಕರೂ ಸೇರಿದಂತೆ ಬಾಲಕರಿಗೆ ಆಸ್ಪತ್ರೆಗಳಲ್ಲೇ ಸುನ್ನತಿಯನ್ನು ಮಾಡಲಾಗುತ್ತಿದೆ ಎಂದು ನಾಗೇಶ್ವರ್ ರಾವ್ ಅವರು ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ.

"ಸುನ್ನತಿ ಪ್ರಯೋಜನಕಾರಿ ವೈದ್ಯಕೀಯ ವಿಧಾನ ಎಂದು ಹಲವಾರು ವೈದ್ಯರಿಗೆ ಕಲಿಸಿರುವ ಅಥವಾ ಪ್ರಭಾವ ಬೀರಿರುವ ಕುರಿತು ನನಗೆ ವಿಶ್ವಾಸಾರ್ಹ ಮಾಹಿತಿ ಇದೆ ಎಂದೂ ಅವರು ಈ ಪತ್ರದಲ್ಲಿ ಹೇಳಿದ್ದಾರೆ.

"ಇದರ ಪರಿಣಾಮವಾಗಿ ಅವರು ಮುಸ್ಲಿಮೇತರ ಬಾಲಕರಿಗೂ ಸುನ್ನತಿಯ ಸಲಹೆ ನೀಡುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.

"ಇದರ ಹಿಂದೆ ಸಂಘಟಿತ ಜಾಲ ಜಾಲವಿರುವಂತಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿದರೆ ಬೆಳಕಿಗೆ ಬರುವ ಸಾಧ್ಯತೆ ಇದೆ. ಈ ವಿಷಯವನ್ನು ಸಾರ್ವಜನಿಕ ಆರೋಗ್ಯ, ವೈದ್ಯಕೀಯ ನೈತಿಕತೆ ಹಾಗೂ ಕೋಮು ಸೌಹಾರ್ದತೆಯ ಹಿತಾಸಕ್ತಿಯ ದೃಷ್ಟಿಯಿಂದ ಈ ಸೂಕ್ಷ್ಮ ವಿಷಯವನ್ನು ಗಾಂಭೀರ್ಯ ಮತ್ತು ತುರ್ತಾಗಿ ನಿಭಾಯಿಸಬೇಕಿದೆ" ಎಂದೂ 1986ರ ಒಡಿಶಾ ಕೇಡ ರ್‌ನ ಐಪಿಎಸ್ ಅಧಿಕಾರಿಯಾದ ನಾಗೇಶ್ವರ್ ರಾವ್ ಎಚ್ಚರಿಸಿದ್ದಾರೆ.

ನಾಗೇಶ್ವರ್ ರಾವ್ ಅವರ ಪೋಸ್ಟ್‌ ಗೆ ಧನ್ಯವಾದ ಸಲ್ಲಿಸಿರುವ ಆಂಧ್ರ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್, "ಆಂಧ್ರ ಪ್ರದೇಶ ಸರಕಾರವು ಸಾಕ್ಷ್ಯಾಧಾರಿತ, ನೈತಿಕ ಮಾಪನಗಳು ಹಾಗೂ ಕೋಮು ಸೌಹಾರ್ದತೆ ಆಧಾರಿತ ವೈದ್ಯಕೀಯ ಪದ್ಧತಿಗೆ ಬದ್ಧವಾಗಿದೆ. ನಾನು ನಿಮ್ಮ ಕಳವಳವನ್ನು ಗಮನಕ್ಕೆ ತೆಗೆದುಕೊಂಡಿದ್ದು, ಅಸ್ತಿತ್ವದಲ್ಲಿರುವ ವೈದ್ಯಕೀಯ ಮಾರ್ಗಸೂಚಿ ಹಾಗೂ ಕಾನೂನಾತ್ಮಕ ಅವಕಾಶಗಳನ್ವಯ ಈ ವಿಷಯದ ಕುರಿತು ಆರೋಗ್ಯ ಇಲಾಖೆ ಪರಿಶೀಲಿಸಲಿದೆ. ಸೂಕ್ತ ಪರಾಮರ್ಶೆಯ ನಂತರ ಅಗತ್ಯ ಬಿದ್ದರೆ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.

ಸೌಜನ್ಯ: theprint.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News