×
Ad

ಆಂಧ್ರಪ್ರದೇಶ| ಸಾಗರ ಪ್ರದೇಶ ಪ್ರವೇಶಿಸಿದ ಬಾಂಗ್ಲಾದೇಶದ 13 ಮೀನುಗಾರರು ವಶಕ್ಕೆ

Update: 2025-12-01 22:18 IST

ಸಾಂದರ್ಭಿಕ ಚಿತ್ರ

ಹೈದರಾಬಾದ್, ಡಿ.1: ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಸಾಗರ ಪೊಲೀಸರು ರವಿವಾರ ಬಾಂಗ್ಲಾದೇಶದ 13 ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ದೋಣಿಯಲ್ಲಿ ಇಂಧನ ಹಾಗೂ ಆಹಾರ ಖಾಲಿ ಆಗಿ ಸಮುದ್ರದಲ್ಲಿ ಸಿಲುಕಿಕೊಂಡ ಬಳಿಕ ಮೀನುಗಾರರು ಜಿಲ್ಲೆಯ ಎಟ್ಚೆರ್ಲಾ ಮಂಡಲದ ಮುಸವನಿಪೇಟಾಕ್ಕೆ ತಲುಪಿದ್ದರು.

ಬಾಂಗ್ಲಾದೇಶದ ಮೀನುಗಾರರ ದೋಣಿ ಪಶ್ಚಿಮಬಂಗಾಳ ಹಾಗೂ ಒಡಿಶಾದತ್ತ ಅಲೆದಾಡಿತು ಹಾಗೂ ಅನಂತರ ಶ್ರೀಕಾಕುಳಂ ಕರಾವಳಿಗೆ ತಲುಪಿತು ಎಂದು ಸಾಗರ ಪೊಲೀಸರು ತಿಳಿಸಿದ್ದಾರೆ.

ಸಮುದ್ರದಲ್ಲಿ ಈ ದೋಣಿ ಹಾಗೂ ಅದರಲ್ಲಿದ್ದವರ ಚಲನವಲನ ಶಂಕಾಸ್ಪದವಾಗಿ ಕಂಡು ಬಂದ ಬಳಿಕ ಸ್ಥಳೀಯ ಮೀನುಗಾರರು ಸಾಗರ ಪೊಲೀಸರಿಗೆ ಮಾಹಿತಿ ನೀಡಿದರು.

ಸಾಗರ ಪೊಲೀಸ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಪ್ರಸಾದ ರಾವ್ ಹಾಗೂ ಸ್ಥಳೀಯ ಸಬ್ ಇನ್ಸ್‌ಪೆಕ್ಟರ್ ಜಿ. ಲಕ್ಷ್ಮಣ್ ರಾವ್ ಸಿಬ್ಬಂದಿಗಳೊಂದಿಗೆ ಕರಾವಳಿಗೆ ಧಾವಿಸಿ ದೋಣಿ ಹಾಗೂ ಅದರಲ್ಲಿದ್ದ 13 ಬಾಂಗ್ಲಾದೇಶಿ ಮೀನುಗಾರರನ್ನು ವಶಕ್ಕೆ ತೆಗೆದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News