×
Ad

Dehradun | ಏಂಜೆಲ್ ಚಕ್ಮಾ ಸಾವು ಪ್ರಕರಣ; ಈಶಾನ್ಯದ ವಿದ್ಯಾರ್ಥಿಗಳಿಂದ ಮೊಂಬತ್ತಿ ಮೆರವಣಿಗೆ

Update: 2026-01-01 20:50 IST

Photo Credit : PTI 

ಡೆಹ್ರಾಡೂನ್, ಜ. 1: ತ್ರಿಪುರಾದ 24 ವರ್ಷದ ಏಂಜೆಲ್ ಚಕ್ಮಾ ಅವರ ಹತ್ಯೆ ಖಂಡಿಸಿ ಹಾಗೂ ನ್ಯಾಯ ಒದಗಿಸುವಂತೆ ಆಗ್ರಹಿಸಿ ಈಶಾನ್ಯದ ವಿದ್ಯಾರ್ಥಿಗಳು ಡೆಹ್ರಾಡೂನ್‌ನಲ್ಲಿ ಗುರುವಾರ ಮೊಂಬತ್ತಿ ಮೆರವಣಿಗೆ ನಡೆಸಿದರು.

‘‘ಯುನಿಫೈಡ್ ತ್ರಿಪುರಾ ಸ್ಟೂಡೆಂಟ್ಸ್ ಅಸೋಸಿಯೇಶನ್’’ (ಯುಟಿಎಸ್‌ಎ) ಅಡಿಯಲ್ಲಿ ಈ ಪ್ರತಿಭಟನೆ ನಡೆಯಿತು. ಗಾಂಧಿ ಪಾರ್ಕ್‌ನಿಂದ ಆರಂಭವಾದ ರ್ಯಾಲಿ ಘಂಟಾಗರ್‌ ನಲ್ಲಿ ಸಮಾಪನಗೊಂಡಿತು.

ರ್ಯಾಲಿಯಲ್ಲಿ ಪ್ರತಿಭಟನಕಾರರು ಮೊಂಬತ್ತಿ ಹಿಡಿದುಕೊಂಡು ಪಾಲ್ಗೊಂಡರು. ಈ ಸಂದರ್ಭ ‘‘ಜನಾಂಗೀಯತೆ ನಿಲ್ಲಿಸಿ’’, ‘‘ನಾವು ಭಾರತೀಯರು’’, ಹಾಗೂ ‘‘ನಮಗೆ ನ್ಯಾಯ ಬೇಕು’’ ಮೊದಲಾದ ಘೋಷಣೆಗಳನ್ನು ಪ್ರತಿಭಟನಕಾರರು ಕೂಗಿದರು.

ಏಕತೆ ಪ್ರದರ್ಶಿಸಲು ರ್ಯಾಲಿಯಲ್ಲಿ ಇತರ ರಾಜ್ಯಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅವರು ಜನಾಂಗೀಯತೆಯ ಆಯಾಮವನ್ನು ಪರಿಗಣಿಸಿಲ್ಲ ಎಂದು ಯುಟಿಎಸ್‌ಎ ಪ್ರಧಾನ ಕಾರ್ಯದರ್ಶಿ ಚುರಾಂಟಾ ತ್ರಿಪುರಾ ಆರೋಪಿಸಿದ್ದಾರೆ.

ಹೊಸ ವರ್ಷವಾದುದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ ಎಂದು ಉಲ್ಲೇಖಿಸಿ ಪ್ರತಿಭಟನೆಯನ್ನು ನಿಲ್ಲಿಸುವಂತೆ ಅಧಿಕಾರಿಗಳು ಪ್ರತಿಭಟನಕಾರರಿಗೆ ಸೂಚಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಏಂಜೆಲ್ ಚಕ್ಮಾ ಅವರ ಮೇಲೆ ಡಿಸೆಂಬರ್ 9ರಂದು ಚಾಕು ಹಾಗೂ ಬಳೆಯಿಂದ ದಾಳಿ ನಡೆಸಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ 17 ದಿನಗಳ ಜೀವನ–ಮರಣಗಳ ನಡುವೆ ಹೋರಾಟ ನಡೆಸಿ ಡಿಸೆಂಬರ್ 27ರಂದು ಸಾವನ್ನಪ್ಪಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News