ಜೀವ ಬೆದರಿಕೆ: ಬಂದೂಕು ಪರವಾನಿಗೆ ಕೋರಿದ ಯುಟ್ಯೂಬರ್, ಗಾಯಕ ಅರ್ಮಾನ್ ಮಲಿಕ್
ಅರ್ಮಾನ್ ಮಲಿಕ್ | PC : bollywoodbubble.com
ಹೊಸದಿಲ್ಲಿ: ಯುಟ್ಯೂಬರ್, ಗಾಯಕ, ರಿಯಾಲಿಟಿ ಶೋ ಖ್ಯಾತಿಯ ಅರ್ಮಾನ್ ಮಲಿಕ್ ತನಗೆ ಜೀವ ಬೆದರಿಕೆ ಇದೆ. ಆದುದರಿಂದ ಬಂದೂಕು ಪರವಾನಿಗೆ ನೀಡುವಂತೆ ಪಂಜಾಬ್ ಪೊಲೀಸರನ್ನು ಕೋರಿದ್ದಾರೆ.
ವೈರಲ್ ವೀಡಿಯೊವೊಂದರಲ್ಲಿ ಅಮ್ರಾನ್ ಮಲಿಕ್ ತಾನು ಜೀವ ಬೆದರಿಕೆ ಕರೆ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಅಲ್ಲದೆ, ತನ್ನ ಸುರಕ್ಷೆಗೆ ಬಂದೂಕು ಪರವಾನಿಗೆ ಅಗತ್ಯ ಎಂದಿದ್ದಾರೆ.
ವೈರಲ್ ಆದ ವೀಡಿಯೊದಲ್ಲಿ ಸಮಯ ನಮೂದಾಗಿಲ್ಲ. ಈ ವೀಡಿಯೊದಿಂದ ಪಂಜಾಬ್‌ನ ಅಮ್ರಾನ್ ಮಲಿಕ್ ಅವರ ಅಭಿಮಾನಿಗಳು ಹಾಗೂ ಸಹ ಕಲಾವಿದರು ಆಘಾತಗೊಂಡಿದ್ದಾರೆ.
‘‘ನನ್ನ ಸುರಕ್ಷೆಗೆ ನಾನು ಶಸ್ತ್ರಾಸ್ತ್ರ ಪರವಾನಿಗೆಗೆ ಕೂಡ ಅರ್ಜಿ ಸಲ್ಲಿಸಿದೆ. ಇದರಿಂದ ಕನಿಷ್ಠ ಪಕ್ಷ ನನ್ನ ಕುಟುಂಬವನ್ನಾದರೂ ರಕ್ಷಿಸಿಕೊಳ್ಳಬಹುದು. ಆದರೆ, ಪ್ರತಿಭಾರಿ ಆಡಳಿತ ನನ್ನ ಅರ್ಜಿಯನ್ನು ತಿರಸ್ಕರಿಸುತ್ತಿದೆ. ನನ್ನ ವಿರುದ್ಧ ಪ್ರಕರಣ ಇದೆ ಎಂದು ಹೇಳುತ್ತಿದೆ. ಆ ಪ್ರಕರಣ ಸಂಪೂರ್ಣ ಸುಳ್ಳು ಹಾಗೂ ಆಧಾರ ರಹಿತ. ಅದರ ಸತ್ಯಾಸತ್ಯತೆಯನ್ನು ನ್ಯಾಯಾಲಯ ಪರಿಶೀಲಿಸುತ್ತಿದೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಅಂತ್ಯದಲ್ಲಿ ಸತ್ಯಕ್ಕೆ ಜಯ ಸಿಗಲಿದೆ. ಆದರೆ, ಅದುವರೆಗೆ ನನ್ನ ಕುಟುಂಬ ಹಾಗೂ ನಾನು ಅಭದ್ರತೆಯಲ್ಲಿ ಜೀವಿಸಬೇಕೇ ?’’ ಎಂದು ಅಮನ್ ಮಲಿಕ್ ವೀಡಿಯೊದಲ್ಲಿ ಪ್ರಶ್ನಿಸಿದ್ದಾರೆ. ಈಗ ಈ ವೀಡಿಯೊವನ್ನು ಅಳಿಸಲಾಗದೆ.