×
Ad

ಕಾಂಗ್ರೆಸ್ ತೊರೆದ ಮರು ದಿನವೇ ಬಿಜೆಪಿ ಸೇರ್ಪಡೆಯಾದ ಅಶೋಕ್ ಚವಾಣ್

Update: 2024-02-13 13:38 IST

Photo: NDTV

ಮುಂಬೈ: ಕಾಂಗ್ರೆಸ್ ತೊರೆದ ಮರು ದಿನವೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜಕೀಯ ಮಹತ್ವ ಹೊಂದಿರುವ ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾಗಿದ್ದ  ಅಶೋಕ್ ಚವಾಣ್ ಅವರನ್ನು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ತ ಚಂದ್ರಶೇಖರ್ ಬವಂಕುಲ್ ಪಕ್ಷಕ್ಕೆ ಬರ ಮಾಡಿಕೊಂಡರು ಎಂದು ndtv.com ವರದಿ ಮಾಡಿದೆ.

ಮುಂಬರುವ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಯಾಗಿ ಅಶೋಕ್ ಚವಾಣ್ ನಾಳೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿರುವುದರಿಂದ, ಅಶೋಕ್ ಚವಾಣ್ ಇಂದೇ ಬಿಜೆಪಿ ಸೇರ್ಪಡೆಯಾಗಬೇಕಾಯಿತು ಎಂದೂ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News