×
Ad

ಅಸ್ಸಾಂ | 128 ವರ್ಷ ಹಳೆಯ ಮಸೀದಿ ನೆಲಸಮ

Update: 2025-06-26 22:08 IST

PC : X

ದಿಬ್ರುಗಢ (ಅಸ್ಸಾಂ): ದಿಬ್ರುಗಢ ಪಟ್ಟಣದ ಕೃತಕ ನೆರೆ ಸಮಸ್ಯೆ ಪರಿಹರಿಸಲು ಒಳಚರಂಡಿ ವ್ಯವಸ್ಥೆ ನಿರ್ಮಾಣ ಮಾಡಲು ಜಿಲ್ಲಾಡಳಿತ ಇಲ್ಲಿನ 128 ವರ್ಷ ಹಳೆಯ ಚೌಲ್‌ಖೋವಾ ಜಾಮಾ ಮಸೀದಿಯನ್ನು ನೆಲಸಮಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ದಿಬ್ರುಗಢದಲ್ಲಿ ಕೃತಕ ನೆರೆ ಸಮಸ್ಯೆಯನ್ನು ಪರಿಹರಿಸುವ ಕ್ರಮವಾಗಿ ದಿಬ್ರುಗಢದ ಜಿಲ್ಲಾಡಳಿತ ಸೋಮವಾರ ಮಸೀದಿಯನ್ನು ನೆಲಸಮಗೊಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿತು. ಕೃತಕ ನೆರೆ ಸಮಸ್ಯೆಯನ್ನು ಪರಿಹರಿಸಲು ಬೊಕುಲ್‌ ನಿಂದ ಸೆಸ್ಸಾ ಸೇತುವೆ ವರೆಗೆ ಸಾಗುವ ಪ್ರಮುಖ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಹಾಗೂ ನವೀಕರಣದ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದಿಬ್ರುಗಢದ ಮುನ್ಸಿಪಲ್ ಮಂಡಳಿ ಆಯುಕ್ತ ಜಯ ವಿಕಾಸ ತಿಳಿಸಿದ್ದಾರೆ.

ಭೂಸ್ವಾಧೀನ ಸೇರಿದಂತೆ ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಮಸೀದಿಯನ್ನು ನೆಲಸಮ ಮಾಡಲಾಗಿದೆ. ಭೂಸ್ವಾಧೀನಕ್ಕೆ ಪರಿಹಾರ ನೀಡುವ ಪ್ರಕ್ರಿಯೆ ಪ್ರಸ್ತುತ ಚಾಲ್ತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಮಸೀದಿ ನೆಲಸಮ ಪ್ರಕ್ರಿಯೆಯ ಸಂದರ್ಭ ಸ್ಥಳೀಯರ ಸಹಕಾರಕ್ಕೆ ವಿಕಾಸ್ ಕೃತಜ್ಞತೆ ಸಲ್ಲಿಸಿದ್ದಾರೆ.

‘‘ಮಸೀದಿ ನೆಲಸಮಗೊಳಿಸಿದ ಕುರಿತಂತೆ ಒಂದು ವರ್ಗದ ಜನರು ಸಾಮಾಜಿಕ ಮಾಧ್ಯಮದಲ್ಲಿ ಜಿಲ್ಲಾಡಳಿತ ಮಸೀದಿಯನ್ನು ಬಲವಂತವಾಗಿ ನೆಲಸಮಗೊಳಿಸಿದೆ ಎಂದು ತಪ್ಪು ಮಾಹಿತಿ ಹರಡುತ್ತಿದೆ. ಇದು ಸತ್ಯವಲ್ಲ. ಮಸೀದಿ ನೆಲಸಮಗೊಳಿಸಲು ಸಮುದಾಯ ಸಂಪೂರ್ಣ ಸಹಕಾರ ನೀಡಿದೆ’’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News