×
Ad

ಅಸ್ಸಾಂ | ಪತ್ನಿಯಿಂದ ವಿಚ್ಛೇದನ ಸಿಕ್ಕಿದ್ದಕ್ಕೆ ಹಾಲಿನಿಂದ ಸ್ನಾನ ಮಾಡಿದ ವ್ಯಕ್ತಿ!

Update: 2025-07-13 19:40 IST

Photo | NDTV

ನಲ್ಬರಿ : ಅಸ್ಸಾಂನ ನಲ್ಬರಿ ಜಿಲ್ಲೆಯ ನಿವಾಸಿಯೋರ್ವ ತನ್ನ ಪತ್ನಿಯಿಂದ ಕಾನೂನುಬದ್ಧವಾಗಿ ವಿಚ್ಚೇದನ ಪಡೆದ ಬಳಿಕ ಹಾಲಿನಿಂದ ಸ್ನಾನ ಮಾಡಿ ಸಂಭ್ರಮಿಸಿದ್ದಾನೆ. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ವೀಡಿಯೊದಲ್ಲಿ ಮಾಣಿಕ್ ಅಲಿ ತನ್ನ ಮನೆಯ ಮುಂದೆ ಪ್ಲಾಸ್ಟಿಕ್ ಶೀಟ್ ಮೇಲೆ ನಿಂತುಕೊಂಡು ಪಕ್ಕದಲ್ಲಿ ನಾಲ್ಕು ಬಕೆಟ್ ಹಾಲು ಇಟ್ಟುಕೊಂಡು ಸ್ನಾನ ಮಾಡುವುದು ಕಂಡು ಬಂದಿದೆ. ಇದರಲ್ಲಿ ಸುಮಾರು 40 ಲೀಟರ್‌ ಹಾಲು ಇತ್ತು ಎಂದು ತಿಳಿದು ಬಂದಿದೆ.  

́ವಿಚ್ಛೇದನ ಪ್ರಕ್ರಿಯೆ ಅಂತಿಮಗೊಂಡಿದೆ ಎಂದು ನನ್ನ ವಕೀಲರು ನಿನ್ನೆ ನನಗೆ ತಿಳಿಸಿದರು. ಹಾಗಾಗಿ, ಇಂದು ನಾನು ನನ್ನ ಸ್ವಾತಂತ್ರ್ಯವನ್ನು ಆಚರಿಸಲು ಹಾಲಿನಲ್ಲಿ ಸ್ನಾನ ಮಾಡುತ್ತಿದ್ದೇನೆʼ ಎಂದು ವೈರಲ್ ವೀಡಿಯೊದಲ್ಲಿ ಮಾಣಿಕ್ ಅಲಿ ಹೇಳಿದ್ದಾರೆ.

́ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ಪ್ರತಿ ಬಾರಿ ಓಡಿಹೋಗುತ್ತಿದ್ದಳು. ನನಗೆ ತುಂಬಾ ಬೇಸರವಾಗುತ್ತಿತ್ತು. ಆದರೆ ನಾನು ನಮ್ಮ ಕುಟುಂಬದ ಶಾಂತಿಗಾಗಿ ಸುಮ್ಮನಿದ್ದೆʼ ಎಂದು ಅಲಿ ಹೇಳಿದ್ದಾರೆ. ವೀಡಿಯೊಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ಈ ಕುರಿತು ಸ್ಥಳೀಯರು ಪ್ರತಿಕ್ರಿಯಿಸಿದ್ದು, ಮಾಣಿಕ್ ಅಲಿ ಪತ್ನಿ ಹಿಂದೆ ಎರಡು ಬಾರಿ ಓಡಿಹೋಗಿದ್ದಳು. ನಂತರ ದಂಪತಿಗಳು ಕಾನೂನುಬದ್ಧವಾಗಿ ವಿಚ್ಛೇದನ ಪಡೆಯಲು ತೀರ್ಮಾನಿಸಿದರು ಎಂದು ಹೇಳಿದ್ದಾರೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News