ಉತ್ತರಾಖಂಡ | ಭಾರಿ ಮಳೆಗೆ ಕಟ್ಟಡ ಕುಸಿತ: ಕನಿಷ್ಠ 12 ಮಂದಿ ನಾಪತ್ತೆ
Update: 2025-09-18 12:22 IST
Photo credit: PTI
ಚಮೋಲಿ: ಭಾರಿ ಮಳೆಯಿಂದಾಗಿ ಹಲವು ಕಟ್ಟಡಗಳು ಕುಸಿದು, ಕನಿಷ್ಠ 12 ಮಂದಿ ನಾಪತ್ತೆಯಾಗಿರುವ ಘಟನೆ ಗುರುವಾರ ಬೆಳಗ್ಗೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದಾನಗರದಲ್ಲಿ ನಡೆದಿದೆ. ಇದರ ಬೆನ್ನಿಗೇ ಜಿಲ್ಲಾಡಳಿತವು ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆಗೆ ಚಾಲನೆ ನೀಡಿದೆ.
ಉತ್ತರಾಖಂಡದ ಡೆಹ್ರಾಡೂನ್ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸಂಭವಿಸಿದ ಮೇಘ ಸ್ಫೋಟದಲ್ಲಿ 23 ಮಂದಿ ಮೃತಪಟ್ಟ ನಂತರ, ಈ ಘಟನೆ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಜಿಲ್ಲಾಡಳಿತ ಹಾಗೂ ರಕ್ಷಣಾ ತಂಡಗಳು, ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿವೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯು ನಂದ್ ಪ್ರಯಾಗ್ ಅನ್ನು ತಲುಪಿದ್ದು, ಇಲ್ಲಿ ಕಟ್ಟಡಗಳ ಅವಶೇಷಗಳಿಂದಾಗಿ ರಸ್ತೆ ಮುಚ್ಚಿಹೋಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ನಂದ್ ಪ್ರಯಾಗ್ ಗೆ ಗೌಚರ್ ನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯೂ ತೆರಳಿದೆ.