×
Ad

ಅಮೆರಿಕದಲ್ಲಿ ಅದಾನಿ ಗ್ರೂಪ್ ವಿರುದ್ಧ ದೋಷಾರೋಪಣೆ ಮಾಡಿದ್ದ ಅಟಾರ್ನಿ ಬ್ರಿಯಾನ್ ಪೀಸ್ ರಾಜೀನಾಮೆ

Update: 2024-12-20 15:37 IST

ಅಟಾರ್ನಿ ಬ್ರಿಯಾನ್ ಪೀಸ್ | PC : PTI 

ಹೊಸದಿಲ್ಲಿ: ಅದಾನಿ ಗ್ರೂಪ್ ವಿರುದ್ಧದ ವಂಚನೆಗೆ ಸಂಬಂಧಿಸಿ ಅಮೆರಿಕದಲ್ಲಿ ಮಾಡಿರುವ ದೋಷಾರೋಪಣೆ ಹಿಂದಿರುವ ಅಟಾರ್ನಿ ಬ್ರಿಯಾನ್ ಪೀಸ್ ಅವರು ಜನವರಿ 10ರಿಂದ ಜಾರಿಗೆ ಬರುವಂತೆ ತಮ್ಮ ಹುದ್ದೆಗೆ ರಾಜೀನಾಮೆಯನ್ನು ಘೋಷಿಸಿದ್ದಾರೆ ಎಂದು ವರದಿಯಾಗಿದೆ.

2021ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಬ್ರಿಯಾನ್ ಪೀಸ್ ಅವರನ್ನು ಸರಕಾರಿ ವಕೀಲರಾಗಿ ನೇಮಕ ಮಾಡಿದ್ದರು. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮೊದಲು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಬ್ರಿಯಾನ್ ಪೀಸ್ ಅವರು ಗೌತಮ್ ಅದಾನಿ ವಿರುದ್ಧದ ದೋಷಾರೋಪಣೆ ಸೇರಿದಂತೆ ಉನ್ನತ ಪ್ರಕರಣಗಳಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಆಗಸ್ಟ್ ನಲ್ಲಿ ಜಾರ್ಜ್ ಸ್ಯಾಂಟೋಸ್ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಸಾಬೀತಾಗಿದೆ. ಲೈಂಗಿಕ ದಂಧೆ ಪ್ರಕರಣಕ್ಕೆ ಸಂಬಂಧಿಸಿ 2022ರಲ್ಲಿ ಹಿಪ್ ಹಾಪ್ ತಾರೆ ಕೆಲ್ಲಿ 30 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ನವೆಂಬರ್ ನಲ್ಲಿ ಬ್ರಿಯಾನ್ ಪೀಸ್ ಅವರು ಗೌತಮ್ ಅದಾನಿ ಮತ್ತು ಇತರರ ವಿರುದ್ಧ ಸೌರ ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿ ವಂಚನೆ ಮತ್ತು ಲಂಚದ ಆರೋಪವನ್ನು ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News