×
Ad

ಆಜ್‌ತಕ್ ಪತ್ರಕರ್ತ ಆತ್ಮಹತ್ಯೆ

Update: 2023-08-14 22:35 IST

ಆಕಾಶದೀಪ್ ಶುಕ್ಲಾ | Photo :twitter \@riteshrajwada

ಹೊಸದಿಲ್ಲಿ: ಆಜ್ ತಕ್‌ ಪತ್ರಕರ್ತ ಆಕಾಶದೀಪ್ ಶುಕ್ಲಾ ಅವರು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ತನ್ನ ಪತ್ನಿ ಮತ್ತು ಆಕೆಯ ಪೋಷಕರಿಂದ "ನಿರಂತರ ಬೆದರಿಕೆಗಳು" ಬಂದ ಕಾರಣ ಪತ್ರಕರ್ತ ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸಿದ್ದರು ಎಂದು ಪತ್ರಕರ್ತೆ ಮತ್ತು ಚಲನಚಿತ್ರ ನಿರ್ಮಾಪಕಿ ದೀಪಿಕಾ ಭಾರದ್ವಾಜ್ ಹೇಳಿದ್ದಾರೆ.

ದಿಲ್ಲಿ ಮೂಲದ ಆಕಾಶದೀಪ್ ಶುಕ್ಲಾ ನಗರದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

2021 ರಿಂದ ಆಜ್ ತಕ್‌ನಲ್ಲಿ ಸಹಾಯಕ ಸಂಪಾದಕರಾಗಿದ್ದ ಶುಕ್ಲಾ ಅವರು, ಸಾವಿನ ಮುನ್ನಾ ದಿನವೂ ತನ್ನೊಂದಿಗೆ ಮಾತನಾಡಿದ್ದರು ಎಂದು ದೀಪಿಕಾ ಹೇಳಿದ್ದಾರೆ.

ಶುಕ್ಲಾ ಅವರು ತಮ್ಮ ಪತ್ನಿ ಮತ್ತು ಆಕೆಯ ಪೋಷಕರಿಂದ ಮಾನಸಿಕ ಕಿರುಕುಳವನ್ನು ನಿರಂತರವಾಗಿ ಅನುಭವಿಸುತ್ತಿದ್ದರು. ಒತ್ತಡದಲ್ಲಿ ಶುಕ್ಲಾ ಅವರ ಮದುವೆಯು ಮದುವೆಯು ನಡೆದಿದ್ದು, ಅವರು ಕಾನೂನು ಕ್ರಮದ ನಿರಂತರ ಬೆದರಿಕೆಗಳಿಗೆ ಒಳಗಾಗಿದ್ದಾರೆ ಎಂದು ದೀಪಿಕಾ ಆರೋಪಿಸಿದ್ದಾರೆ.

Free press journal ಜೊತೆಗೆ ಮಾಹಿತಿ ಹಂಚಿಕೊಂಡ ಶುಕ್ಲಾ ಅವರ ಆಪ್ತ ಸ್ನೇಹಿತೆ ಜಾಗೃತಿ ಶುಕ್ಲಾ ಅವರು, "ಮೃತ ಪತ್ರಕರ್ತ ತಮ್ಮ ವೈಯಕ್ತಿಕ ಜೀವನದಿಂದಾಗಿ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರು" ಎಂದು ಸ್ಪಷ್ಟಪಡಿಸಿದ್ದಾರೆ.

ಶುಕ್ಲಾ ಮತ್ತು ಅವರ ಪತ್ನಿ ಸೋಮವಾರ ಬೆಳಿಗ್ಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು, ವಾಗ್ವಾದದ ನಂತರ, ಆತ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಜಾಗೃತಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News