×
Ad

ಜೆಡಿಯು ಎನ್ ಡಿ ಎ ಗೆ ವಾಪಾಸ್ ; ವದಂತಿ ತಳ್ಳಿ ಹಾಕಿದ ನಿತೀಶ್ ಕುಮಾರ್

Update: 2023-09-25 22:50 IST

ನಿತೀಶ್ ಕುಮಾರ್ | Photo: PTI 

ಪಾಟ್ನಾ: ತನ್ನ ಪಕ್ಷ ಜೆಡಿಯು ಬಿಜೆಪಿ ನೇತೃತ್ವದ ಎನ್ ಡಿ ಎ ಮರಳಲಿದೆ ಎಂಬ ಕುರಿತ ಒಂದು ವರ್ಗದ ಮಾಧ್ಯಮದ ವರದಿಯನ್ನು ಸೋಮವಾರ ತಳ್ಳಿಹಾಕಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ನಾವು ಒಂದು ವರ್ಷದ ಹಿಂದೆಯೇ ಎನ್ ಡಿ ಎ ಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದೇವೆ. ಈಗ ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುವುದೇ ನಮ್ಮ ಪ್ರಧಾನ ಕಾಳಜಿ ಎಂದಿದ್ದಾರೆ.

ವದಂತಿ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ನಿತೀಶ್ ಕುಮಾರ್, ಏನು ಅಸಂಬದ್ಧ ಮಾತನಾಡುತ್ತೀರಿ ಎಂದರು. ಬಿಜೆಪಿ ವಿರೋಧಿ ಇಂಡಿಯಾ ಮೈತ್ರಿಕೂಟದ ಪ್ರಮಖ ವ್ಯಕ್ತಿಯಾಗಿರುವ ನಿತೀಶ್ ಕುಮಾರ್, ತನ್ನ ಪಕ್ಷದ ಸಹೋದ್ಯೋಗಿಗಳು ತಾನು ಪ್ರಧಾನಿ ಆಗುವ ಎಲ್ಲ ಗುಣಲಕ್ಷಣಗಳನ್ನು ಹೊಂದಿದ್ದೇನೆ ಎಂದು ಮಾತನಾಡುತ್ತಿರುವುದರ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘‘ಇಂತಹ ಹೇಳಿಕೆಗಳನ್ನು ನೀಡದಂತೆ ನಾನು ನನ್ನ ಸಹೋದ್ಯೋಗಿಗಳಿಗೆ ಈಗಾಗಲೇ ಹೇಳಿದ್ದೇನೆ. ಇಂಡಿಯಾ ಮೈತ್ರಿಕೂಟದ ಏಕತೆಯನ್ನು ಬಲಪಡಿಸುವುದು ನನ್ನ ಏಕೈಕ ಆಶಯವಾಗಿದೆ. ನಾನು ನಿಟ್ಟಿನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದೇನೆ’’ ಎಂದು ಅವರು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News