×
Ad

Delhi | ಸಾಂತಾಕ್ಲಾಸ್ ಟೋಪಿ ಧರಿಸಿದ್ದಕ್ಕೆ ಮಹಿಳೆಯರ ವಿರುದ್ಧ ಮತಾಂತರ ಆರೋಪಿಸಿ ಅನುಚಿತವಾಗಿ ವರ್ತಿಸಿದ ಸಂಘಪರಿವಾರದ ಕಾರ್ಯಕರ್ತರು; ವೀಡಿಯೊ ವೈರಲ್‌

Update: 2025-12-23 14:35 IST

Photo: x/screengrab

ಹೊಸದಿಲ್ಲಿ,ಡಿ.23: ದಿಲ್ಲಿಯ ಲಜಪತ್ ನಗರ ಪ್ರದೇಶದಲ್ಲಿ ಸಾಂತಾಕ್ಲಾಸ್ ಟೋಪಿಗಳನ್ನು ಧರಿಸಿದ್ದ ಕ್ರಿಶ್ಚಿಯನ್ ಮಹಿಳೆಯರು ಮತ್ತು ಮಕ್ಕಳ ಗುಂಪಿನ ವಿರುದ್ಧ ಮತಾಂತರ ಆರೋಪ ಹೊರಿಸಿ, ಅವರನ್ನು ಆ ಪ್ರದೇಶದಿಂದ ಹೊರಹೋಗುವಂತೆ ಬಜರಂಗದಳದ ಕಾರ್ಯಕರ್ತರು ಒತ್ತಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್‌ ಆಗಿದೆ.

ವೀಡಿಯೊ ಹಾಗೂ ಪೋಸ್ಟ್‌ಗಳ ಪ್ರಕಾರ, ಸಾಂತಾಕ್ಲಾಸ್ ಕ್ಯಾಪ್ ಧರಿಸಿದ್ದ ಮಹಿಳೆಯರು ಮತ್ತು ಮಕ್ಕಳಿದ್ದ ಗುಂಪನ್ನು ಬಜರಂಗದಳದ ಕಾರ್ಯಕರ್ತರು ಎದುರುಗೊಂಡರು. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಚಟುವಟಿಕೆಗಳನ್ನು ನಡೆಸಬಾರದು; ಮನೆಯೊಳಗೆ ಮಾತ್ರ ಆಚರಿಸಬೇಕು ಎಂದು ಅವರು ಸೂಚಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾರ್ಯಕರ್ತರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ವೀಡಿಯೊದಲ್ಲಿನ ಆರೋಪಗಳನ್ನು ಮಾಧ್ಯಮಗಳು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News