ಹೈಜಂಪ್ ಮಾಡಿದ ಚಿನ್ನ; 10 ಗ್ರಾಂ ಚಿನ್ನದ ಬೆಲೆ 1.5 ಲಕ್ಷ ರೂ.ನತ್ತ!
ಮಂಗಳೂರಿನಲ್ಲಿ ಚಿನಿವಾರ ಪೇಟೆ ಹೇಗಿದೆ?
ಸಾಂದರ್ಭಿಕ ಚಿತ್ರ | Photo Credit : freepik
ಹಬ್ಬಗಳು ಆರಂಭವಾಗುತ್ತಿರುವುದರಿಂದ ಚಿನ್ನದ ಬೇಡಿಕೆ ಹೆಚ್ಚಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದು ದೇಶೀಯ ದರಗಳ ಮೇಲೂ ಪರಿಣಾಮ ಬೀರಿದೆ.
ಎರಡು ದಿನ ಸ್ಥಿರವಾಗಿದ್ದ ಚಿನ್ನದ ಬೆಲೆ ಸೋಮವಾರ ಮತ್ತು ಮಂಗಳವಾರದಂದು ಸಾರ್ವಕಾಲಿಕ ಏರಿಕೆ ಕಂಡಿದೆ. ಜಾಗತಿಕ ಬಿಕ್ಕಟ್ಟಿನ ನಡುವೆಯೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಸೋಮವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ ರೂ 1.50 ಲಕ್ಷದತ್ತ ದಾಪುಗಾಲು ಹಾಕಿದ್ದು, ರೂ 1.38 ಲಕ್ಷ ರೂ ತಲುಪಿದೆ. ಬೆಳ್ಳಿ ದರ ಪ್ರತಿ ಕೆಜಿಗೆ 2.21 ಲಕ್ಷ ರೂ. ತಲುಪಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಳವಾಗಿರುವುದರಿಂದ ಹೂಡಿಕೆದಾರರು ಹಾಗೂ ಖರೀದಿದಾರರು ಆತಂಕಕ್ಕೆ ಒಳಗಾಗಿದ್ದಾರೆ.
ಹಬ್ಬಗಳು ಆರಂಭವಾಗುತ್ತಿರುವುದರಿಂದ ಚಿನ್ನದ ಬೇಡಿಕೆ ಹೆಚ್ಚಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದು ದೇಶೀಯ ದರಗಳ ಮೇಲೂ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಖರೀದಿ ಮಾಡುವವರು ತಾತ್ಕಾಲಿಕವಾಗಿ ನಿರ್ಧಾರ ಮುಂದೂಡುವ ಪರಿಸ್ಥಿತಿ ಎದುರಾಗಿದೆ.
►ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು?
ಮಂಗಳವಾರ ಡಿಸೆಂಬರ್ 23ರಂದು ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಾಖಲೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,855 ರೂ. (+240), ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,700 ರೂ. (+220) ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ ರೂ 10,391 ರೂ. (+180) ಬೆಲೆಗೆ ತಲುಪಿದೆ.
►ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ:
ಮಂಗಳವಾರ ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 13,855ಕ್ಕೇರಿದೆ. ನಿನ್ನೆ 13,615 ರೂ ಇದ್ದು, ಇವತ್ತು 240 ರೂ. ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 12,700 ರೂ. ಆಗಿದೆ. ಸೋಮವಾರ 12,480 ರೂ.ಇದ್ದು, ರೂ 220 ರೂ. ಬದಲಾವಣೆಯಾಗಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಮಂಗಳವಾರ 1 ಗ್ರಾಂಗೆ 10,391 ರೂ.ಗೆ ಏರಿದೆ. ಸೋಮವಾರ 10,211 ರೂ.ಇದ್ದು, 180 ರೂ. ಬದಲಾವಣೆಯಾಗಿದೆ.
►ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂ ನಗರಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,36,160 ರೂ. ತಲುಪಿದ್ದು, 22 ಕ್ಯಾರೆಟ್ ಚಿನ್ನ 1,24,810 ರೂ. ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಚೆನ್ನೈನಲ್ಲಿ 24 ಕ್ಯಾರೆಟ್ ಚಿನ್ನ 1,37,140 ರೂ. ಏರಿಕೆಯಾಗಿದ್ದರೆ, 22 ಕ್ಯಾರೆಟ್ ಚಿನ್ನ 1,25,710 ರೂ. ಆಗಿದೆ.
►ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ
ಚಿನ್ನದ ಜೊತೆಗೆ ಬೆಳ್ಳಿಯ ದರದಲ್ಲೂ ಏರಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಸ್ವಲ್ಪ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿ ಬೆಲೆ 223 ರೂ. ಆಗಿದ್ದು, ಮಂಗಳವಾರ 210 ರೂ. ರಷ್ಟಿತ್ತು. 4ರೂ.ವಿನಷ್ಟು ಬೆಲೆ ಏರಿಕೆಯಾಗಿದೆ.
ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂ ನಗರಗಳಲ್ಲಿ ಕಿಲೋಗ್ರಾಂ ಬೆಳ್ಳಿ 2,31,100 ರೂ.ಗೆ ತಲುಪಿದ್ದು, ಸೋಮವಾರಕ್ಕೆ ಹೋಲಿಸಿದರೆ ಸಣ್ಣ ಪ್ರಮಾಣದ ಏರಿಕೆ ದಾಖಲಾಗಿದೆ. ಬೆಂಗಳೂರು ಹಾಗೂ ದೆಹಲಿಯಲ್ಲಿ ಕಿಲೋಗ್ರಾಂ ಬೆಳ್ಳಿ 2,19,100 ರೂ. ದರದಲ್ಲಿ ವಹಿವಾಟು ನಡೆಯುತ್ತಿದೆ.