×
Ad

ವಂದೇ ಭಾರತ್ ರೈಲುಗಳ ಲೋಕೋ ಪೈಲಟ್‌ ಗಳ ವೇತನ ಎಷ್ಟು ಗೊತ್ತೆ?

Update: 2025-12-23 15:49 IST

ವಂದೇ ಭಾರತ್ ರೈಲು | Photo Credit : PTI 

ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ವಂದೇ ಭಾರತ್ ರೈಲುಗಳ ಲೋಕೋ ಪೈಲಟ್‌ ಗಳ ವೇತನವೆಷ್ಟು ಗೊತ್ತೆ? ಅತಿವೇಗದ ರೈಲುಗಳನ್ನು ಓಡಿಸುವುದು ಸಾಮಾನ್ಯ ಕೆಲಸವಲ್ಲ. ರೈಲ್ವೆ ಈ ಕೆಲಸವನ್ನು ಅನುಭವಿ ಪೈಲಟ್‌ ಗಳಿಗೆ ಮಾತ್ರ ವಹಿಸುತ್ತದೆ.

ಒಬ್ಬ ವ್ಯಕ್ತಿಯು ನೇರವಾಗಿ ವಂದೇ ಭಾರತ್ ರೈಲಿಗೆ ಪೈಲಟ್ ಆಗಲು ಸಾಧ್ಯವಿಲ್ಲ. ಇದಕ್ಕಾಗಿ ಒಂದು ವ್ಯವಸ್ಥಿತ ಪ್ರಕ್ರಿಯೆಯಿದೆ. ಹಿರಿಯ ಪೈಲಟ್‌ ಗಳಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಪೈಲಟ್‌ ಗಳು ವೃತ್ತಿಜೀವನ ಆರಂಭವಾಗುತ್ತದೆ. ಅದಕ್ಕೂ ಮೊದಲು ಲೋಕೋ ಪೈಲಟ್‌ ಗಳು ಯಾರ್ಡ್‌ಗಳಲ್ಲಿ ರೈಲುಗಳನ್ನು ಸರಿಹೊಂದಿಸಿ ನಂತರ ಸರಕು ರೈಲುಗಳನ್ನು ಓಡಿಸುವ ಮೂಲಕ ಅನುಭವವನ್ನು ಪಡೆಯುತ್ತಾರೆ. ದೀರ್ಘಾವಧಿಯ ಅನುಭವದ ನಂತರ, ಪ್ರಯಾಣಿಕ ರೈಲುಗಳನ್ನು ಮತ್ತು ನಂತರ ವಂದೇ ಭಾರತ್‌ ನಂತಹ ಪ್ರೀಮಿಯಂ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ಅವಕಾಶ ಸಿಗುತ್ತದೆ.

ಸಂಬಳ ಮತ್ತು ಭತ್ಯೆಗಳು

7ನೇ ವೇತನ ಆಯೋಗದ ಪ್ರಕಾರ, ಲೋಕೋ ಪೈಲಟ್‌ ಗಳಿಗೆ ಉತ್ತಮ ಸಂಬಳವಿದೆ. ಹೊಸ ಸಹಾಯಕ ಲೋಕೋ ಪೈಲಟ್ ನ ಆರಂಭಿಕ ಮೂಲ ವೇತನ 19,900 ರೂ.ಗಳಾಗಿದ್ದು, ಒಟ್ಟು ಭತ್ಯೆಗಳು 44,000 ರೂ.ಗಳಿಂದ 51,000 ರೂ.ಗಳವರೆಗೆ ಇರಬಹುದು.

ಮುಖ್ಯ ಲೋಕೋ ಇನ್ಸ್‌ಪೆಕ್ಟರ್ ಎನ್ನುವುದು ಅತ್ಯುನ್ನತ ಮಟ್ಟ. ಅವರು ರೈಲು ಕಾರ್ಯಾಚರಣೆ ಮತ್ತು ತರಬೇತಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ವಂದೇ ಭಾರತ್ ಪೈಲಟ್‌ ಗಳ ಜವಾಬ್ದಾರಿಗಳು ಕೇವಲ ರೈಲು ಪ್ರಾರಂಭಿಸುವುದಲ್ಲ, ಅವರು ಪ್ರಮುಖ ಜವಾಬ್ದಾರಿಗಳನ್ನು ಸಹ ನಿರ್ವಹಿಸುತ್ತಾರೆ. 7ನೇ ವೇತನ ಆಯೋಗದ ಪ್ರಕಾರ, ಲೋಕೋ ಪೈಲಟ್‌ ಗಳಿಗೆ ಉತ್ತಮ ಸಂಬಳವಿದೆ.

ವಂದೇ ಭಾರತ್‌ ನಂತರ ಪ್ರೀಮಿಯಂ ರೈಲನ್ನು ನಿರ್ವಹಿಸುವ ಹಿರಿಯ ಪೈಲಟ್‌ ಗಳ ಮೂಲ ವೇತನವು ರೂ. 65,000 ರಿಂದ ರೂ. 85,000 ವರೆಗೆ ಇರುತ್ತದೆ. 30 ವರ್ಷಗಳ ಅನುಭವ ಹೊಂದಿರುವವರು ಅಥವಾ ಮುಖ್ಯ ಲೋಕೋ ಇನ್ಸ್‌ಪೆಕ್ಟರ್ (CLI) ಮಟ್ಟದ ಅಧಿಕಾರಿಗಳು ಎಲ್ಲಾ ಭತ್ಯೆಗಳನ್ನು ಒಳಗೊಂಡಂತೆ ತಿಂಗಳಿಗೆ ರೂ. 2,00,000 ದಿಂದ ರೂ. 2,50,000 ವರೆಗೆ ಗಳಿಸುತ್ತಾರೆ.

ಅನುಭವಿ ಪೈಲಟ್‌ ಗಳಿಗೆ ಮಾತ್ರ ಅವಕಾಶ

ವಂದೇ ಭಾರತ್‌ ನಂತಹ ಅತಿ ವೇಗದ ರೈಲುಗಳನ್ನು ಓಡಿಸುವುದು ಸಾಮಾನ್ಯ ಕೆಲಸವಲ್ಲ. ರೈಲ್ವೆ ಈ ಜವಾಬ್ದಾರಿಗಳನ್ನು ಹೆಚ್ಚು ಕೌಶಲ್ಯಪೂರ್ಣ ಮತ್ತು ಅನುಭವಿ ಪೈಲಟ್‌ ಗಳಿಗೆ ಮಾತ್ರ ವಹಿಸುತ್ತದೆ. ಈ ಪೈಲಟ್‌ ಗಳ ಜವಾಬ್ದಾರಿಗಳು ಕೇವಲ ರೈಲು ಪ್ರಾರಂಭಿಸುವುದಲ್ಲ, ಅವರು ಇತರ ಪ್ರಮುಖ ಜವಾಬ್ದಾರಿಗಳನ್ನು ಸಹ ನಿರ್ವಹಿಸುತ್ತಾರೆ. ಆಧುನಿಕ ಲೋಕೋಮೋಟಿವ್ ಮತ್ತು ಗಣಕೀಕೃತ ಎಂಜಿನ್ ವ್ಯವಸ್ಥೆಗಳ ಮೇಲ್ವಿಚಾರಣೆ, ರೈಲಿನ ವೇಗವನ್ನು ನಿಯಂತ್ರಿಸುವುದು ಮತ್ತು ಬ್ರೇಕಿಂಗ್ ವ್ಯವಸ್ಥೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು, ನಿಲ್ದಾಣದ ಸಿಬ್ಬಂದಿ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕ ಮೊದಲಾದ ಕರ್ತವ್ಯ ನಿರ್ವಹಿಸುತ್ತಾರೆ.

ಹಿರಿಯ ಪೈಲಟ್‌ ಗಳು 30 ವರ್ಷಗಳ ಅನುಭವ ಹೊಂದಿರುವವರು ಅಥವಾ ಮುಖ್ಯ ಲೋಕೋ ಇನ್ಸ್‌ಪೆಕ್ಟರ್ (CLI) ಮಟ್ಟದ ಅಧಿಕಾರಿಗಳು ಎಲ್ಲಾ ಭತ್ಯೆಗಳನ್ನು ಒಳಗೊಂಡಂತೆ ತಿಂಗಳಿಗೆ ರೂ. 2,00,000 ದಿಂದ ರೂ. 2,50,000 ವರೆಗೆ ಗಳಿಸುತ್ತಾರೆ.

ಹೆಚ್ಚುವರಿ ಪ್ರಯೋಜನಗಳು

ರಾತ್ರಿ ಕೆಲಸ ಮಾಡುವವರಿಗೆ ಸಂಬಳದ ಜೊತೆಗೆ ಟಿಎ, ಡಿಎ, ಮನೆ ಬಾಡಿಗೆ ಮತ್ತು ರಾತ್ರಿ ಕರ್ತವ್ಯ ಭತ್ಯೆಗಳನ್ನು ಪಡೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ವಂದೇ ಭಾರತ್‌ ನಂತಹ ಪ್ರತಿಷ್ಠಿತ ರೈಲನ್ನು ಓಡಿಸುವುದು ಅವರಿಗೆ ದೊಡ್ಡ ಗೌರವದ ಕೆಲಸವೂ ಹೌದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News