×
Ad

ವೇಶ್ಯಾವಾಟಿಕೆ ದಂಧೆ ಆರೋಪ: ಬಿಜೆಪಿ ನಾಯಕನ ಬಂಧನ

Update: 2024-02-23 15:56 IST

ಜೆಪಿ ನಾಯಕ ಸಬ್ಯಸಾಚಿ ಘೋಷ್‌ (Credit: indiatoday.in)

ಕೊಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಸಂದೇಶಖಾಲಿ ವಿವಾದದ ನಡುವೆಯೇ ಬಿಜೆಪಿ ನಾಯಕ ಸಬ್ಯಸಾಚಿ ಘೋಷ್‌ ಅವರನ್ನು ಹೌರಾದಲ್ಲಿ ವೇಶ್ಯವಾಟಿಕೆ ದಂಧೆ ನಡೆಸುತ್ತಿರುವ ಆರೋಪದಲ್ಲಿ ಬಂಧಿಸಲಾಗಿದೆ ಎಂದು indiatoday.in ವರದಿ ಮಾಡಿದೆ.

ಹೌರಾದಲ್ಲಿ ಸಬ್ಯಸಾಚಿ ಹೊಂದಿರುವ ಹೋಟೆಲ್‌ನಲಿ ನಡೆಯುತ್ತಿದ್ದ ಈ ದಂಧೆಯನ್ನು ಪೊಲೀಸರು ಬೇಧಿಸಿದ್ದಾರೆಂದು ಟಿಎಂಸಿ ಹೇಳಿದೆ.

“ಹೌರಾದ ಸಂಕ್ರೈಲ್‌ನಲ್ಲಿ ಹೋಟೆಲ್‌ನಲ್ಲಿ ಅಪ್ರಾಪ್ತ ಹುಡುಗಿಯರನ್ನು ಬಳಸಿ ವೇಶ್ಯಾವಟಿಕೆ ಜಾಲ ನಡೆಸುವಾಗ ಬಿಜೆಪಿ ನಾಯಕ ಸಬ್ಯಸಾಚಿ ಘೋಷ್‌ ಸಿಕ್ಕಿಬಿದ್ದಿದ್ದಾರೆ, ಪೊಲೀಸರು 11 ಆರೋಪಿಗಳನ್ನು ಬಂಧಿಸಿ 6 ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಇದು ಬಿಜೆಪಿ. ಅವರು ಬೇಟಿಗಳನ್ನು ರಕ್ಷಿಸುವುದಿಲ್ಲ, ಆದರೆ ವೇಶ್ಯಾವಾಟಿಕೆ ನಡೆಸುವವರನ್ನು ರಕ್ಷಿಸುತ್ತಾರೆ,” ಎಂದು ಟಿಎಂಸಿ ಟ್ವೀಟ್‌ ಮಾಡಿದೆ.

ಆಡಳಿತ ತೃಣಮೂಲ ಪಕ್ಷದ ಹಲವು ಮುಖಂಡರು ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಭೂಕಬಳಿಕೆ ನಡೆಸಿದ್ದಾರೆಂಬ ಬಿಜೆಪಿ ಆರೋಪಗಳ ನಡುವೆ ಇಂದಿನ ಬೆಳವಣಿಗೆ ಟಿಎಂಸಿ ಕೈಗೆ ಹೊಸ ಅಸ್ತ್ರವೊದಗಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News