×
Ad

ನಿರ್ದೇಶಕ ರಂಜಿತ್ ವಿರುದ್ಧ ದೂರು ದಾಖಲಿಸಿದ ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ

Update: 2024-08-26 21:57 IST

ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ(indiatoday.in) , ನಿರ್ದೇಶಕ ರಂಜಿತ್ (PC : X)

ಕೊಚ್ಚಿ (ಕೇರಳ): ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ಅವರು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಗೆ ರಾಜೀನಾಮೆ ಸಲ್ಲಿಸಿದ ಮರುದಿನವಾದ ಸೋಮವಾರದಂದು ಬಂಗಾಳಿ ನಟಿ ಶ್ರೀಲೇಖಾ ಮಿತ್ರಾ ಅವರ ವಿರುದ್ಧ ಕೊಚ್ಚಿ ನಗರ ಪೊಲೀಸರಿಗೆ ದೂರು ದಾಖಲಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಂಜಿತ್ ತಮ್ಮೊಂದಿಗೆ ಲೈಂಗಿಕವಾಗಿ ಅನುಚಿತವಾಗಿ ವರ್ತಿಸಿದ್ದರು ಎಂದು ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಈ ದೂರು ದಾಖಲಾಗಿದೆ.

ಕೊಚ್ಚಿ ನಗರ ಪೊಲೀಸ್ ಆಯುಕ್ತರಿಗೆ ಈಮೇಲ್ ಒಂದನ್ನು ರವಾನಿಸಿರುವ ಮಿತ್ರಾ, 2009ರಲ್ಲಿ ರಂಜಿತ್ ನಿರ್ದೇಶಿಸುತ್ತಿದ್ದ ‘ಪಾಲೇರಿಮನಿಕ್ಕಂ’ ಚಿತ್ರದಲ್ಲಿನ ಪಾತ್ರದ ಕುರಿತು ಚರ್ಚಿಸಲು ಕೊಚ್ಚಿಗೆ ತೆರಳಿದ್ದಾಗ ನಡೆದಿದ್ದ ಘಟನೆಯೊಂದನ್ನು ಅವರು ವಿಸ್ತೃತವಾಗಿ ವಿವರಿಸಿದ್ದಾರೆ.

ಈ ಚರ್ಚೆಯ ಸಂದರ್ಭದಲ್ಲಿ ನನ್ನ ಕೈ ಹಿಡಿದುಕೊಂಡ ರಂಜಿತ್, ನಂತರ ಲೈಂಗಿಕ ಉದ್ದೇಶದಿಂದ ನನ್ನ ದೇಹದ ಇತರ ಭಾಗಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.

ನಾನು ಕೋಲ್ಕತ್ತಾದಿಂದ ಬಂದಿದ್ದುದರಿಂದ ಹಾಗೂ ಸ್ಥಳೀಯ ಕಾನೂನು ಪ್ರಕ್ರಿಯೆಯ ಬಗ್ಗೆ ನನಗೆ ಅರಿವಿಲ್ಲದೆ ಇದ್ದುದರಿಂದ, ನಾನು ಮೊದಲಿಗೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ. ಆದರೀಗ ಮುಂದೆ ಬಂದಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.

ನನ್ನ ಈಮೇಲ್ ಅನ್ನೇ ಅಧಿಕೃತ ದೂರೆಂದು ಪರಿಗಣಿಸಿ, ರಂಜಿತ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಕೊಚ್ಚಿ ಪೊಲೀಸರಿಗೆ ಮಿತ್ರಾ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News