ಸತತ ಸೋಲಿನ ನಂತರ ರಾಜಕೀಯ ತೊರೆದ ಭೈಚುಂಗ್ ಭುಟಿಯಾ
ಭೈಚುಂಗ್ ಭುಟಿಯಾ | PC : PTI
ಗ್ಯಾಂಗ್ಟಕ್: ಇತ್ತೀಚೆಗೆ ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಭಾರತೀಯ ಫುಟ್‌ಬಾಲ್ ತಂಡದ ಮಾಜಿ ನಾಯಕ ಭೈಚುಂಗ್ ಭುಟಿಯಾ ಮಂಗಳವಾರ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಸಿಕ್ಕಿ ವಿಧಾನಸಭಾ ಚುನಾವಣೆಯಲ್ಲಿ ಬರ್ಫಂಗ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಕ್ಕಿ ಡೆಮಾಕ್ರಟಿಕ್ ಫ್ರಂಟ್‌ನ ಉಪಾಧ್ಯಕ್ಷರೂ ಆದ ಭೈಚುಂಗ್ ಭುಟಿಯಾ, ತಮ್ಮ ಪ್ರತಿಸ್ಪರ್ಧಿ ಎಸ್‌ಕೆಎಂನ ಅಭ್ಯರ್ಥಿ ರಿಕ್ಷಲ್ ದೋರ್ಜೀ ಭುಟಿಯಾ ವಿರುದ್ಧ ಪರಾಭವಗೊಂಡಿದ್ದರು. ಇದು ಅವರ ಸತತ ಆರನೆಯ ಚುನಾವಣಾ ಸೋಲಾಗಿತ್ತು.
2004ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಭೈಚುಂಗ್ ಭುಟಿಯಾ, ಟಿಎಂಸಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ನಂತರ ತಮ್ಮ ರಾಜ್ಯವಾದ ಸಿಕ್ಕಿನಲ್ಲಿ ಹಮ್ರೊ ಸಿಕ್ಕಿ ಪಕ್ಷವನ್ನು ಸ್ಥಾಪಿಸುವ ಮೂಲಕ ಸಿಕ್ಕಿಂ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿದರು. ಕಳೆದ ವರ್ಷ ಅವರು ತಮ್ಮ ಪಕ್ಷವನ್ನು ಪವನ್ ಚಾಮ್ಲಿಂಗ್ ನೇತೃತ್ವದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‌ನಲ್ಲಿ ವಿಲೀನಗೊಳಿಸಿದ್ದರು.