×
Ad

ಭೀಮಾ ಕೋರೆಗಾಂವ್ ಪ್ರಕರಣ ; ಕಣ್ಣು ಶಸ್ತ್ರಚಿಕಿತ್ಸೆಗೆ ಹೈದರಾಬಾದ್ ಗೆ ತೆರಳಲು ವರವರ ರಾವ್ ಗೆ ಕೋರ್ಟ್ ಅನುಮತಿ

Update: 2023-11-30 21:53 IST

ವರವರ ರಾವ್ | Photo: NDTV 

ಮುಂಬೈ: ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಹೈದರಾಬಾದ್ ಗೆ ತೆರಳಲು ಮುಂಬೈಯ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ನಾಯಾಲಯ ಅನುಮತಿ ನೀಡಿದೆ.

ನ್ಯಾಯಮೂರ್ತಿ ರಾಜೇಶ್ ಕಟರಿಯಾ ಅವರು ವರವರ ರಾವ್ ಅವರಿಗೆ ಎಡ ಕಣ್ಣು ಶಸ್ತ್ರಚಿಕಿತ್ಸೆಗೆ ಡಿಸೆಂಬರ್ 5 ಹಾಗೂ 11ರ ನಡುವೆ ಹೈದರಾಬಾದ್ ಗೆ ತೆರಳಲು ಅನುಮತಿ ನೀಡಿದ್ದಾರೆ.

ಎನ್ಐಎ ಮುಂದೆ ಡಿಸೆಂಬರ್ 4ರಂದು ವರದಿ ಸಲ್ಲಿಸಬೇಕು ಹಾಗೂ ಪ್ರಯಾಣದ ಎಲ್ಲಾ ವಿವರ, ವಿಳಾಸ, ಹೈದರಾಬಾದ್ನಲ್ಲಿ ತಂಗುವ ಸ್ಥಳದ ಸಂಪರ್ಕ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ನ್ಯಾಯಾಲಯ ನೀಡಿದ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಎಲ್ಗಾರ್ ಪರಿಷದ್-ಮಾವೋವಾದಿ ನಂಟು ಪ್ರಕರಣದಲ್ಲಿ ವರವರ ರಾವ್ ಅವರನ್ನು 2018ರಲ್ಲಿ ಬಂಧಿಸಲಾಗಿತ್ತು. ಅವರಿಗೆ ಬಾಂಬೆ ಉಚ್ಚ ನ್ಯಾಯಾಲಯ ವೈದ್ಯಕೀಯ ನೆಲೆಯಲ್ಲಿ 2021 ಮಾರ್ಚ್ನಲ್ಲಿ ತಾತ್ಕಾಲಿಕ ಜಾಮೀನು ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News