×
Ad

ಬಿಹಾರದಲ್ಲಿ ಶೌಚಗುಂಡಿಯಲ್ಲಿ ವಿಷಾನಿಲದಿಂದ ಮೂವರು ಮೃತ್ಯು

Update: 2024-10-16 20:39 IST

ಸಾಂದರ್ಭಿಕ ಚಿತ್ರ

ಪಾಟ್ನಾ : ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ತಮ್ಮ ಮನೆಯ ಶೌಚಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಒಂದೇ ಕುಟುಂದ ಮೂವರು ವಿಷಾನಿಲ ಸೇವನೆಯಿಂದಾಗಿ ಸಾವನ್ನಪ್ಪಿದ್ದಾರೆ. ವಿಶ್ವವಿದ್ಯಾನಿಲಯ ಪೊಲೀಸ್ ಠಾಣೆಯ ನವಗಾಧಿ ರಾಮತೋಲಾ ಬಡಾವಣೆಯಲ್ಲಿ ಈ ದುರಂತ ಸಂಭವಿಸಿದೆ. ಮೃತರನ್ನು ಸುಶೀಲ್ ಕುಮಾರ್ ರಾಮ್ (22), ನವಲ್ ರಾಮ್ (22) ಹಾಗೂ ಸುಧೀರ್ ರಾಮ್ (29) ಎಂದು ಗುರುತಿಸಲಾಗಿದೆ.

ತಮ್ಮ ಹಳೆಯ ಮನೆಯ ಶೌಚಗುಂಡಿಯನ್ನು ಸ್ವಚ್ಥಗೊಳಿಸಲು ಈ ಮೂವರು ಯತ್ನಿಸುತ್ತಿದ್ದಾಗ ಅವರು ವಿಷಾನಿಲ ಹೊರಹೊಮ್ಮಿದ್ದು ಮೂವರು ಸ್ಥಳದಲ್ಲೇ ಕುಸಿದುಬಿದಿದ್ದರು ಕೂಡಲೇ ಕುಟುಂಬದ ಇತರ ಸದಸ್ಯರು ಅವರನ್ನು ಹೊರಗೆಳೆದು ದರ್ಭಾಂಗ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಚಿಕಿತ್ಸೆ ಪಡೆಯುತ್ತಿರುವಾಗಲೇ ಅಸುನೀಗಿದ್ದಾರೆಂದು ವೈದ್ಯರು ಘೋಷಿಸಿದರು.

ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿ ಅಕ್ಟೋಬರ್ 7ರಂದು ಶೌಚಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಕಟ್ಟಡ ನಿರ್ಮಾಣ ಕಾರ್ಮಿಕನೊಬ್ಬ ವಿಷಾನಿಲ ಸೇವನೆಯಿಂದ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದು, ಇತರ ಮೂವರು ಗಂಭೀರವಾಗಿ ಅಸ್ವಸ್ಥರಾದ ಘಟನೆ ವರದಿಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News