×
Ad

ಬಿಹಾರ ವಿಧಾನ ಸಭೆ ಚುನಾವಣೆ: ಜೆಡಿಯುನಿಂದ ಅಭ್ಯರ್ಥಿಗಳ ಪಟ್ಟಿ ಅಂತಿಮ; ನಾಲ್ವರು ಹಾಲಿ ಶಾಸಕರನ್ನು ಕೈಬಿಡುವ ಸಾಧ್ಯತೆ

Update: 2025-10-12 20:22 IST

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ - Photo Credit: PTI 

ಪಾಟ್ನಾ, ಅ. 12: ಮುಂಬರುವ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ಎಲ್ಲಾ ಅಭ್ಯರ್ಥಿಗಳನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ (ಯು) ಪಕ್ಷ ಅಂತಿಮಗೊಳಿಸಿದೆ. ಪಕ್ಷವು ನಾಲ್ವರು ಹಾಲಿ ಶಾಸಕರನ್ನು ಕೈಬಿಡುವ ಸಾಧ್ಯತೆ ಇದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ರಾಜ್ಯ ವಿಧಾನ ಸಭೆಯ 243 ಕ್ಷೇತ್ರಗಳ ಪೈಕಿ 103 ಕ್ಷೇತ್ರಗಳಲ್ಲಿ ಜೆಡಿಯು ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಎನ್‌ಡಿಎಯ ಹಿರಿಯ ನಾಯಕರು ಸೂಕ್ತ ಸಮಯದಲ್ಲಿ ಔಪಚಾರಿಕ ಘೋಷಣೆ ಮಾಡಲಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಜೆಡಿ (ಯು)ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

‘‘ನಾವು ಸ್ಪರ್ಧಿಸುವ ಸ್ಥಾನಗಳನ್ನು ಗುರುತಿಸಲಾಗಿದೆ. ಅಭ್ಯರ್ಥಿಗಳನ್ನು ಕೂಡ ಅಂತಿಮಗೊಳಿಸಲಾಗಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸದ ನಾಲ್ವರು ಶಾಸಕರ ಸ್ಥಾನಕ್ಕೆ ಹೊಸ ಮುಖಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಶಾಸಕ ಸಂಜೀವ್ ಕುಮಾರ್ ಕಳೆದ ವಾರ ಆರ್‌ಜೆಡಿ ಸೇರಿರುವುದರಿಂದ ಖಗರಿಯಾ ಪರ್ಬತ್ತಾ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ನಮ್ಮ ಮಾಜಿ ಶಾಸಕಿ ಭೀಮಾ ಬಾರ್ತಿ ವಿರೋಧ ಪಕ್ಷಗಳಿಗೆ ಸೇರ್ಪಡೆಗೊಂಡಿರುವುದರಿಂದ ರೂಪೌಲಿ ವಿಧಾನ ಸಭಾ ಕ್ಷೇತ್ರದಲ್ಲೂ ಇದೇ ರೀತಿ ನಡೆಯಲಿದೆ. ಪರ್ಬತ್ತಾದಂತೆ ರೂಪೌಲಿ ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ.

ಯಾಕೆಂದರೆ, ಈ ಹಿಂದೆ ಪಕ್ಷದಿಂದ ಹಲವು ಬಾರಿ ಜಯ ಗಳಿಸಿದ್ದ ಮಾಜಿ ಶಾಸಕಿ ಭೀಮಾ ಭಾರ್ತಿ ವಿರೋಧ ಪಕ್ಷವನ್ನು ಸೇರಿದ್ದಾರೆ’’ ಎಂದು ಜೆಡಿ (ಯು) ನಾಯಕ ತಿಳಿಸಿದ್ದಾರೆ.

ಉತ್ತಮವಾಗಿ ಕಾರ್ಯ ನಿರ್ವಹಿಸದ ನಾಲ್ವರು ಶಾಸಕರನ್ನು ಬದಲಾಯಿಸಲಾಗುವುದು. ಅವರ ವಿಧಾನ ಸಭಾ ಕ್ಷೇತ್ರಗಳು ಭಾಗಲ್ಪುರ, ನವಾಡ ಹಾಗೂ ಬಂಕಾ ಜಿಲ್ಲೆಗಳಲ್ಲಿವೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News