×
Ad

ಬಿಹಾರ ವಿಧಾನಸಭಾ ಚುನಾವಣೆ | ಪ್ರಶಾಂತ್ ಕಿಶೋರ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

Update: 2025-10-13 20:25 IST

ಪ್ರಶಾಂತ್ ಕಿಶೋರ್ | Photo Credit : PTI

ಪಾಟ್ನಾ,ಅ.13: ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ ಕಿಶೋರ ಅವರ ಜನ ಸುರಾಜ್ ಪಕ್ಷವು ನ.6 ಮತ್ತು ನ.11ರಂದು ಎರಡು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗಾಗಿ ತನ್ನ 66 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರ ಬಿಡುಗಡೆಗೊಳಿಸಿದೆ.

ಪಕ್ಷವು ತನ್ನ 51 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅ.9ರಂದು ಬಿಡುಗಡೆಗೊಳಿಸಿತ್ತು.

ಪಟ್ಟಿಯು ಹಾಲಿ ಶಾಸಕ,ಆರ್‌ಜೆಡಿಯ ತೇಜಸ್ವಿ ಯಾದವ್ ಅವರು ಹ್ಯಾಟ್ರಿಕ್ ಸಾಧಿಸುವ ಗುರಿಯನ್ನು ಹೊಂದಿರುವ ರಾಘೋಪುರ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿಲ್ಲ. ರಾಘೋಪುರದಲ್ಲಿ ತೇಜಸ್ವಿಗೆ ನೇರ ಸವಾಲನ್ನೊಡ್ಡುವ ಮೂಲಕ ಕಿಶೋರ್ ತನ್ನ ರಾಜಕೀಯ ರಂಗಪ್ರವೇಶ ಮಾಡಬಹುದು ಎಂಬ ವ್ಯಾಪಕ ನಿರೀಕ್ಷೆಗಳಿವೆ.

ಕಿಶೋರ್ ರಾಘೋಪುರದಿಂದ ಸ್ವತಃ ತಾನೇ ಕಣಕ್ಕಿಳಿಯಬಹುದು ಎಂಬ ಸುಳಿವುಗಳನ್ನು ಆಗಾಗ್ಗೆ ನೀಡುತ್ತಲೇ ಬಂದಿದ್ದಾರೆ. ಕಿಶೋರ್ ಅ.11ರಂದು ರಾಘೋಪುರದಿಂದ ಪ್ರಚಾರ ಅಭಿಯಾನವನ್ನು ಆರಂಭಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News