×
Ad

ಬಿಹಾರ ವಿಧಾನಸಭಾ ಚುನಾವಣೆ | ನಾಳೆ ನ.6ರಂದು ಮೊದಲ ಹಂತದ ಮತದಾನ

Update: 2025-11-05 21:56 IST

Photo PTI

ಪಾಟ್ನಾ,ನ.5: ಬಿಹಾರವು ನ.6ರಂದು ನಡೆಯಲಿರುವ ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವಂತೆ ರಾಜ್ಯದಲ್ಲಿ ರಾಜಕೀಯ ಹಣಾಹಣಿ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ. 18 ಜಿಲ್ಲೆಗಳ 121 ವಿಧಾನಸಭಾ ಕ್ಷೇತ್ರಗಳಲ್ಲಿಯ 3.75 ಕೋಟಿಗೂ ಅಧಿಕ ಮತದಾರರು 1,314 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದ್ದಾರೆ. ಅಭ್ಯರ್ಥಿಗಳಲ್ಲಿ ಹಲವಾರು ಸಚಿವರು,ಪ್ರಮುಖ ನಾಯಕರು ಮತ್ತು ವಿವಿಧ ಕ್ಷೇತ್ರಗಳಿಂದ ಹೊಸಬರು ಸೇರಿದ್ದಾರೆ.

ಮತದಾನವು ಬೆಳಿಗ್ಗೆ ಏಳರಿಂದ ಸಂಜೆ ಆರು ಗಂಟೆಯವರೆಗೆ ನಡೆಯಲಿದೆ. ಆದರೆ ಭದ್ರತಾ ಕಾರಣಗಳಿಂದಾಗಿ ಸಿಮ್ರಿ ಭಕ್ತಿಯಾರಪುರ, ಮಹಿಷಿ, ತಾರಾಪುರ, ಮುಂಗೇರ್ ಮತ್ತು ಜಮಾಲ್ಪುರಗಳಂತಹ ಆಯ್ದ ಕ್ಷೇತ್ರಗಳಲ್ಲಿ ಮತ್ತು ಸೂರ್ಯಗಡದ 56 ಮತಗಟ್ಟೆಗಳಲ್ಲಿ ಮತದಾನವು ಒಂದು ಗಂಟೆ ಮೊದಲೇ, ಸಂಜೆ ಐದಕ್ಕೆ ಅಂತ್ಯಗೊಳ್ಳಲಿದೆ.

ಮೊದಲ ಹಂತಕ್ಕಾಗಿ ಪ್ರಚಾರವು ಮಂಗಳವಾರ ಅಂತ್ಯಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News