ಬಿಹಾರದಲ್ಲಿ ಗೆಲುವು ನಮ್ಮದು, ಇನ್ನು ಬಂಗಾಳದ ಸರದಿ : ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ ಬೆನ್ನಲ್ಲೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರತಿಕ್ರಿಯೆ
Update: 2025-11-14 10:58 IST
ಕೇಂದ್ರ ಸಚಿವ ಗಿರಿರಾಜ್ ಸಿಂಗ್ (Photo: PTI)
ಹೊಸದಿಲ್ಲಿ : ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಮುನ್ನಡೆ ಸಾಧಿಸುತ್ತಿದ್ದಂತೆ ಎನ್‌ಡಿಎಗೆ ಗೆಲುವು ಖಚಿತ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದು, ಇನ್ನು ಪಶ್ಚಿಮ ಬಂಗಾಳದ ಸರದಿ ಎಂದು ಹೇಳಿದ್ದಾರೆ.
ಬಿಹಾರವನ್ನು ಅರಿತಿರುವವರು ತಿಳಿದಂತೆ ಇಲ್ಲಿನ ಜನರು ‘ಜಂಗಲ್ ರಾಜ್ʼ ಬಯಸುವುದಿಲ್ಲ. ಬಿಹಾರದ ಜನರು ಅರಾಜಕತೆ ಮತ್ತು ಭ್ರಷ್ಟ ನಾಯಕತ್ವವನ್ನು ತಿರಸ್ಕರಿಸಿದ್ದಾರೆ.
ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ಹೇಳುತ್ತೇನೆ. ಬಿಹಾರದಲ್ಲಿ ಗೆಲುವು ನಮ್ಮದು; ನಾವು ಬಂಗಾಳದಲ್ಲೂ ಗೆಲ್ಲುತ್ತೇವೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.