ಕೈ ಹಿಡಿಯದ ಜನಪ್ರಿಯತೆ: ಬಿಹಾರದ ʼಸಿಂಗಂʼ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿಗೆ ಎರಡೂ ಕ್ಷೇತ್ರಗಳಲ್ಲೂ ಸೋಲು
ಶಿವದೀಪ್ ಲಾಂಡೆ (Photo: Facebook/shivdeeplandeofficial)
ಪಾಟ್ನಾ : ಬಿಹಾರದ "ಸಿಂಗಂ" ಎಂದೇ ಖ್ಯಾತರಾಗಿರುವ ಮಾಜಿ ಐಪಿಎಸ್ ಅಧಿಕಾರಿ ಶಿವದೀಪ್ ಡಬ್ಲ್ಯೂ ಲಾಂಡೆ 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲೂ ಸೋಲನ್ನು ಅನುಭವಿಸಿದ್ದಾರೆ.
ಶಿವದೀಪ್ ಡಬ್ಲ್ಯೂ ಲಾಂಡೆ ಅವರು ಅರಾರಿಯಾ ಮತ್ತು ಜಮಾಲ್ಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಲಾಂಡೆ ರಾಜಕೀಯಕ್ಕೆ ಪಾದಾರ್ಪಣೆ ವೇಳೆ ಹೆಚ್ಚಿನ ಗಮನ ಸೆಳೆದಿದ್ದರೂ ಅವರು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.
ಲಾಂಡೆ ಅವರ ಸ್ಪರ್ಧೆಯಿಂದ ಗಮನ ಸೆಳೆದಿದ್ದ ಜಮಾಲ್ಪುರ ಕ್ಷೇತ್ರದಲ್ಲಿ ಜೆಡಿ(ಯು) ಅಭ್ಯರ್ಥಿ ನಚಿಕೇತ ಮಂಡಲ್ ಜಯಗಳಿಸಿದರು. ಲಾಂಡೆ ಅವರಿಗೆ ಜನಪ್ರಿಯತೆಯ ಹೊರತಾಗಿ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗಿಲ್ಲ.
ಅರಾರಿಯಾ ಕ್ಷೇತ್ರದಲ್ಲಿ ಇದೇ ರೀತಿಯ ಫಲಿತಾಂಶ ಹೊರ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಅಬಿದುರ್ ರೆಹಮಾನ್ ಈ ಕ್ಷೇತ್ರದಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಲಾಂಡೆ ಸೋಲನ್ನು ಅನುಭವಿಸಿದ್ದಾರೆ.