×
Ad

ಪ್ರಧಾನಿಯ ಧ್ಯಾನದಿಂದ ಸೂರ್ಯ ಕೂಡ ತೀವ್ರತೆ ಕಡಿಮೆ ಮಾಡಿದ್ದಾನೆ ಎಂದ ಬಿಜೆಪಿ ಅಭ್ಯರ್ಥಿ ರವಿ ಕಿಶನ್‌

Update: 2024-06-01 17:36 IST

PC : @srinivasiyc (ಬಿಜೆಪಿಯ ಗೋರಖಪುರ್‌ ಅಭ್ಯರ್ಥಿ ರವಿ ಕಿಶನ್‌)

ಗೋರಖಪುರ್: ಬಿಜೆಪಿಯ ಗೋರಖಪುರ್‌ ಅಭ್ಯರ್ಥಿ ಹಾಗೂ ಹಾಲಿ ಸಂಸದ ರವಿ ಕಿಶನ್‌ ಇಂದು ಗೋರಖಪುರದ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿದ ನಂತರ ವಿಚಿತ್ರ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಗೋರಖಪುರದ ಜನತೆಗೆ ವಿಪರೀತ ತಾಪಮಾನದಿಂದ ಮುಕ್ತಿ ನೀಡಿದ ಹವಾಮಾನದಲ್ಲಿನ ಬದಲಾವಣೆಯು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಅಥವಾ ಧ್ಯಾನ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

ಮತ ಚಲಾಯಿಸಿದ ನಂತರ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಅವರು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಅದೇ ಸಮಯ ಪ್ರಧಾನಿಯ ಸಾಧನೆ ಅಥವಾ ಧ್ಯಾನದಿಂದ ಸೂರ್ಯ ಕೂಡ ತನ್ನ ತೀವ್ರತೆಯನ್ನು ಕಡಿಮೆ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News