×
Ad

ಮಧ್ಯಪ್ರದೇಶ | ಅರ್ಧದಲ್ಲೇ ಕೆಟ್ಟು ನಿಂತ ಕ್ರೇನ್: ಆಪರೇಟರ್ ಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಸಂಸದ

Update: 2025-11-01 15:17 IST

Screengrab:X/@PTI_News

ಭೋಪಾಲ್: ಶುಕ್ರವಾರ ಸತ್ನಾದಲ್ಲಿ ಆಯೋಜಿಸಲಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ರ 150ನೇ ಜನ್ಮದಿನಾಚರಣೆಯಂದು ಕ್ರೇನ್ ಒಂದು ಅರ್ಧದಲ್ಲೇ ಕೆಟ್ಟು ನಿಂತಿದ್ದರಿಂದ ಆಕ್ರೋಶಗೊಂಡ ಬಿಜೆಪಿ ಸಂಸದ ಗಣೇಶ್ ಸಿಂಗ್, ಕ್ರೇನ್ ಆಪರೇಟರ್ ಗೆ ಕಪಾಳ ಮೋಕ್ಷ ಮಾಡಿರುವ ಘಟನೆ ವಿವಾದದ ಸ್ವರೂಪಕ್ಕೆ ತಿರುಗಿದೆ.

ಸಂಸದ ಗಣೇಶ್ ಸಿಂಗ್ ಅವರು ಹೈಡ್ರಾಲಿಕ್ ಕ್ರೇನ್ ಬಳಸಿ, ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾದಾಗ ಈ ತಾಂತ್ರಿಕ ದೋಷ ಕಂಡು ಬಂದಿದೆ. ಇದರಿಂದ ಕೆಲಹೊತ್ತು ಅವರು ಮೇಲೆಯೇ ಸಿಲುಕಿಕೊಳ್ಳಬೇಕಾಯಿತು.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕ್ರೇನ್ ನೆಲಕ್ಕೆ ಇಳಿದಾಗ, ಅದರಿಂದ ಕೆಳಗಿಳಿದ ಸಂಸದ ಗಣೇಶ್ ಸಿಂಗ್, ಕ್ರೇನ್ ಆಪರೇಟರ್ ಗಣೇಶ ಕುಶ್ವಾಹ ಎಂಬವರ ಕೈಹಿಡಿದೆಳೆದು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಎದುರೇ ಅವರಿಗೆ ಕಪಾಳ ಮೋಕ್ಷ ಮಾಡುತ್ತಿರುವುದು ಸೆರೆಯಾಗಿದೆ.

ಆದರೆ, ತಾನು ಕ್ರೇನ್ ಆಪರೇಟರ್ ಗೆ ಕಪಾಳ ಮೋಕ್ಷ ಮಾಡಿದ್ದೇನೆ ಎಂಬ ವರದಿಗಳನ್ನು ಸತ್ನಾವನ್ನು 2004ರಿಂದ ಪ್ರತಿನಿಧಿಸುತ್ತಾ ಬರುತ್ತಿರುವ ಗಣೇಶ್ ಸಿಂಗ್ ನಿರಾಕರಿಸಿದ್ದಾರೆ.

“ನಾನು ಯಾರ ಕೆನ್ನೆಗೂ ಹೊಡೆಯಲಿಲ್ಲ. ನಾನು ಆತನನ್ನು ಕೇವಲ ಬೈದೆ. ಇದು ಕಾಂಗ್ರೆಸ್ ಕಾರ್ಯಕರ್ತರು ಸೃಷ್ಟಿಸಿರುವ ನಾಟಕವಾಗಿದೆ” ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.

ಸಂಸದ ಗಣೇಶ್ ಸಿಂಗ್ ನಡವಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, “ಕ್ರೇನ್ ನಲ್ಲಿ ಸಿಲುಕಿಕೊಂಡಿದ್ದ ಸಂಸದರನ್ನು ರಕ್ಷಿಸಲು ಹೋಗಿದ್ದು ಆ ಅಮಾಯಕ ವ್ಯಕ್ತಿ ಮಾಡಿದ ತಪ್ಪಾಗಿದೆ” ಎಂದು ಟೀಕಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News